ಐಪಿಎಲ್ 14: ಉತ್ಸಾಹಿ ಪಂಜಾಬ್-ಡೆಲ್ಲಿ ಮುಖಾಮುಖಿ

ಅಹಮ್ಮದಾಬಾದ್| Krishnaveni K| Last Modified ಭಾನುವಾರ, 2 ಮೇ 2021 (09:11 IST)
ಅಹಮ್ಮದಾಬಾದ್: ರ ಎರಡನೇ ಪಂದ್ಯದಲ್ಲಿ ಇಂದು ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಪಂಜಾಬ್ ಮತ್ತು ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ.

 
ಪಂಜಾಬ್ ಕಳೆದ ಎರಡು ಪಂದ್ಯಗಳಿಂದ ಸುಧಾರಿತ ಪ್ರದರ್ಶನ ನೀಡಿರುವ ಉತ್ಸಾಹದಲ್ಲಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸಿಕ್ಕ ಗೆಲುವು ಅದರ ಆತ್ಮವಿಶ್ವಾಸ ಹೆಚ್ಚಿಸಿದೆ.
 
ಇತ್ತ ಡೆಲ್ಲಿ ಕೂಡಾ ಕಡಿಮೆಯಲ್ಲ. 7 ಪಂದ್ಯಗಳಿಂದ 5 ನ್ನು ಗೆದ್ದು ಉತ್ಸಾಹದಲ್ಲಿರುವ ಡೆಲ್ಲಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಶಿಖರ್ ಧವನ್, ರಿಷಬ್ ಪಂತ್ ಬ್ಯಾಟಿಂಗ್ ನಲ್ಲಿ ಸಿಡಿದರೆ ಇದನ್ನು ಕಟ್ಟಿ ಹಾಕುವುದು ಪಂಜಾಬ್ ಗೆ ಕಷ್ಟವಾಗಲಿದೆ. ಈ ಪಂದ್ಯ ಸಂಜೆ 7.30 ರಿಂದ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :