ಐಪಿಎಲ್ 14: ‘ಕ್ಯಾಪ್ಟನ್’ ವಿರಾಟ್ ಕೊಹ್ಲಿಗೆ ಸೋಲಿನ ವಿದಾಯ

ದುಬೈ| Krishnaveni K| Last Modified ಮಂಗಳವಾರ, 12 ಅಕ್ಟೋಬರ್ 2021 (08:46 IST)
ದುಬೈ: ರಲ್ಲೂ ಕಪ್ ಗೆಲ್ಲುವ ಕನಸು ವಿರಾಟ್ ಕೊಹ್ಲಿ ಪಾಲಿಗೆ ಕನಸಾಗಿಯೇ ಉಳಿಯಿತು. ನಿನ್ನೆಯ ಪ್ಲೇ ಆಫ್ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆರ್ ಸಿಬಿ 4 ವಿಕೆಟ್ ಗಳ ಸೋಲು ಅನುಭವಿಸಿತು.

 
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಬಲಾಢ್ಯರೇ ಕೈಕೊಟ್ಟರು. ನಾಯಕ ಕೊಹ್ಲಿ 39, ದೇವದತ್ತ್ ಪಡಿಕ್ಕಲ್ 21 ರನ್ ಗಳಿಸಿದರು. ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 15, ಶ್ರಿಕರ್ ಭರತ್ 9, ಎಬಿಡಿ ವಿಲಿಯರ್ಸ್ 11 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದಾಗಿ ಆರ್ ಸಿಬಿಗೆ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 138 ರನ್ ಗಳಿಸಲಷ್ಟೇ ಶಕ್ತವಾಯಿತು. ಸುನಿಲ್ ನರೈನ್ 4 ವಿಕೆಟ್ ಕಬಳಸಿದರು.
 
ಈ ಸಾಧಾರಣ ಮೊತ್ತ ಬೆನ್ನತ್ತಲು ಕೆಕೆಆರ್ ತಿಣುಕಾಡವಾಗಬೇಕಾಯಿತು. ಶುಬ್ನಂ ಗಿಲ್ 29 ರನ್, ವೆಂಕಟೇಶ್ ಐಯರ್ 26 ರನ್, ನಿತೀಶ್ ರಾಣಾ 23, ಸುನಿಲ್ ನರೈನ್ 26 ರನ್ ಗಳಿಸಿದರು. ಅಂತಿಮ ಓವರ್ ನಲ್ಲಿ ಏಳು ರನ್ ಬೇಕಾಗಿತ್ತು. ಕೊನೆಗೆ 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಆರ್ ಸಿಬಿ ಐಪಿಎಲ್ 14 ರಿಂದ ಹೊರಬಿತ್ತು. ಕೊಹ್ಲಿ ಒಂದೇ ಒಂದು ಐಪಿಎಲ್ ಚಾಂಪಿಯನ್ ಶಿಪ್ ಗೆಲ್ಲದೇ ನಾಯಕತ್ವಕ್ಕೆ ವಿದಾಯ ಹೇಳುವಂತಾಯಿತು.
ಇದರಲ್ಲಿ ಇನ್ನಷ್ಟು ಓದಿ :