Widgets Magazine

ಈ ಬಾರಿ ಬೆಂಗಳೂರಿನಲ್ಲಿ ನಡೆಯಲ್ಲ ಐಪಿಎಲ್ ಹರಾಜು

ಮುಂಬೈ| Krishnaveni K| Last Modified ಮಂಗಳವಾರ, 1 ಅಕ್ಟೋಬರ್ 2019 (11:19 IST)
ಮುಂಬೈ: ಐಪಿಎಲ್ ಕ್ರೀಡಾಕೂಟದ ಹರಾಜು ಪ್ರಕ್ರಿಯೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಸ್ಥಳ ಬದಲಾವಣೆಯಾಗಿದೆ.

 
ಈ ಬಾರಿಯ ಹರಾಜು ಪ್ರಕ್ರಿಯೆ ಕೋಲ್ಕೊತ್ತಾದಲ್ಲಿ ನಡೆಯಲಿದೆ. 2020 ರ ಐಪಿಎಲ್ ಹರಾಜು ಪ್ರಕ್ರಿಯೆ ಕೋಲ್ಕೊತ್ತಾದಲ್ಲಿ ಡಿಸೆಂಬರ್ 19 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.
 
8.2 ಕೋಟಿ ರೂ. ಗಳೊಂದಿಗೆ ಡೆಲ್ಲಿ ತಂಡ ತನ್ನ ಖಾತೆಯಲ್ಲಿ ಹೆಚ್ಚು ಉಳಿತಾಯ ಹೊಂದಿದ್ದರೆ ರಾಜಸ್ಥಾನ್ ರಾಯಲ್ಸ್ 7.15 ಕೋಟಿ ರೂ. ಹೊಂದಿದೆ. ನವಂಬರ್ 14ರೊಳಿಗೆ ಆಟಗಾರರ ಕೊಡು ಕೊಳ್ಳುವಿಕೆ ವ್ಯವಹಾರ ನಡೆಸಬಹುದಾಗಿದೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿಗಳಿಗೂ ಮಾಹಿತಿ ನೀಡಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :