ಐಪಿಎಲ್ ನಡೆಸಬೇಕೋ, ರದ್ದು ಮಾಡಬೇಕೋ? ಮಂಗಳವಾರ ತೀರ್ಮಾನ

ಮುಂಬೈ| Krishnaveni K| Last Updated: ಸೋಮವಾರ, 23 ಮಾರ್ಚ್ 2020 (12:15 IST)
ಮುಂಬೈ: ಕೊರೋನಾವೈರಸ್ ಭೀತಿಯಿಂದಾಗಿ ಮುಂದೂಡಿಕೆಯಾಗಿರುವ ಐಪಿಎಲ್ ಸೀಸನ್ 13 ಮುಂದಿನ ದಿನಗಳಲ್ಲಿ ಮಾಡಬೇಕೋ ಅಥವಾ ರದ್ದು ಮಾಡಬೇಕೋ ಎಂಬ ವಿಚಾರವಾಗಿ ಮಂಗಳವಾರ ತೀರ್ಮಾನಿಸುವ ಸಾಧ‍್ಯತೆಯಿದೆ.

 
ಮಂಗಳವಾರ ವಿವಿಧ ಫ್ರಾಂಚೈಸಿ ಮಾಲಿಕರೊಂದಿಗೆ ಬಿಸಿಸಿಐ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಈ ವೇಳೆ ಈ ವಿಚಾರ ಚರ್ಚೆಯಾಗಲಿದೆ.
 
ಕೊರೋನಾ ಈಗಾಗಲೇ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಸದ್ಯದ ಮಟ್ಟಿಗೆ ಐಪಿಎಲ್ ನಡೆಸುವುದು ಅಸಾಧ‍್ಯ. ತೀರಾ ತಡವಾಗಿ ಆಯೋಜಿಸಿದರೆ ಅಂತಾರಾಷ್ಟ್ರೀಯ ವೇಳಾಪಟ್ಟಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ವರ್ಷದ ಕೂಟ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಮಾಡುವ ಸಾಧ್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :