ಐಪಿಎಲ್ ಮುಂದೂಡಿಕೆಯಾಗಿದ್ದರಿಂದ ಕೆಎಲ್ ರಾಹುಲ್ ಗೆ ಲಾಭ!

ಮುಂಬೈ| Krishnaveni K| Last Modified ಬುಧವಾರ, 5 ಮೇ 2021 (09:31 IST)
ಮುಂಬೈ: ಕೊರೋನಾ ಕಾರಣದಿಂದ ಐಪಿಎಲ್ ಮುಂದೂಡಿಕೆಯಾಗಿದ್ದರಿಂದ ಯಾರಿಗೆಲ್ಲಾ ನಷ್ಟವಾಗುತ್ತದೋ ಬಿಡುತ್ತದೋ, ಕಿಂಗ್ಸ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಗೆ ಮಾತ್ರ ಲಾಭವಾಗಲಿದೆ.
 

ಅಪೆಂಡಿಟಿಸೈಟಿಸ್ ಗೊಳಗಾಗಿರುವ ರಾಹುಲ್ ಈಗ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಕಳೆದ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಅಷ್ಟೇ ಅಲ್ಲ, ತಕ್ಷಣವೇ ಅವರಿಗೆ ಐಪಿಎಲ್ ತಂಡ ಕೂಡಿಕೊಳ್ಳುವುದು ಕಷ್ಟವಾಗಿತ್ತು.
 
ರಾಹುಲ್ ಮತ್ತೆ ತಂಡ ಕೂಡಿಕೊಳ್ಳಬೇಕಾದರೆ ಕ್ವಾರಂಟೈನ್ ಅವಧಿ ಮುಗಿಸಿ ಬಳಿಕವಷ್ಟೇ ಬಯೋ ಬಬಲ್ ವಾತಾವರಣಕ್ಕೆ ಸೇರಿಕೊಳ್ಳಬೇಕಿತ್ತು. ಇದಕ್ಕೆ ದಿನಗಳು ಬೇಕಾಗಿದ್ದವು. ಹೀಗಾಗಿ ಐಪಿಎಲ್ ಮುಂದೂಡಿಕೆಯಾಗಿರುವುದರಿಂದ ರಾಹುಲ್ ಮತ್ತು ಪಂಜಾಬ್ ಪಡೆಗೆ ಲಾಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :