ಭಾರತದ ಕೊರೋನಾ ಸಂಕಷ್ಟಕ್ಕೆ ಅರ್ಧ ಸಂಬಳವನ್ನೇ ದಾನ ಮಾಡಿದ ವಿಂಡೀಸ್ ಕ್ರಿಕೆಟಿಗ

ನವದೆಹಲಿ| Krishnaveni K| Last Modified ಶನಿವಾರ, 1 ಮೇ 2021 (07:37 IST)
ನವದೆಹಲಿ: ಭಾರತದಲ್ಲಿ ಕೊರೋನಾ ಪ್ರಕರಣಗಳು ಮಿತಿ ಮೀರಿದ್ದು, ಜನರ ಜೀವನ ಸಂಕಷ್ಟದಲ್ಲಿರುವುದನ್ನು ನೋಡಿ ವಿಂಡೀಸ್ ಮೂಲದ ಕಿಂಗ್ಸ್ ಪಂಜಾಬ್ ಐಪಿಎಲ್ ತಂಡದ ಕ್ರಿಕೆಟಿಗ ಭಾರೀ ದೇಣಿಗೆ ನೀಡಿದ್ದಾರೆ.

 
ಐಪಿಎಲ್ ನಲ್ಲಿ ತಾನು ಸಂಪಾದಿಸಿದ ಅರ್ಧದಷ್ಟು ಹಣವನ್ನು ಭಾರತದ ಕೊರೋನಾ ಪರಿಹಾರ ನಿಧಿಗೆ ಅರ್ಪಿಸಲು ಪೂರನ್ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
 
ಭಾರತದ ಸಂಕಷ್ಟ ಸ್ಥಿತಿಗೆ ಮರುಗಿರುವ ಅವರು ಜನರು ಸ್ವಯಂ ಪ್ರೇರಿತರಾಗಿ ಸಹಾಯಕ್ಕೆ ಧಾವಿಸುವಂತೆ ಕರೆ ನೀಡಿದ್ದಾರೆ. ನನಗೆ ಕೆಲವು ವರ್ಷಗಳಿಂದ ಪ್ರೀತಿ ಕೊಡುತ್ತಿರುವ ದೇಶದಲ್ಲಿ ಸಂಕಷ್ಟವಾಗಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ. ಎಲ್ಲರೂ ಇದಕ್ಕೆ ಕೈ ಜೋಡಿಸಬೇಕಿದೆ’ ಎಂದು ಪೂರನ್ ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :