ಮತ್ತೆ ವಿಫಲರಾದ ಗ್ಲೆನ್ ಮ್ಯಾಕ್ಸ್ ವೆಲ್: ಆರ್ ಸಿಬಿ 14 ಕೋಟಿ ಹಳ್ಳಕ್ಕೆ!

ಬೆಂಗಳೂರು| Krishnaveni K| Last Modified ಮಂಗಳವಾರ, 23 ಫೆಬ್ರವರಿ 2021 (09:50 IST)
ಬೆಂಗಳೂರು: ಐಪಿಎಲ್ 14 ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸ್ಟ್ರೇಲಿಯಾ ಮೂಲದ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು 14 ಕೋಟಿ ರೂ. ಕೊಟ್ಟು ಖರೀದಿ ಮಾಡಿತ್ತು. ಆದರೆ ಈಗ ಅವರು ಕಳಪೆ ಫಾರ್ಮ್ ಪ್ರದರ್ಶಿಸುತ್ತಿರುವುದನ್ನು ನೋಡಿ ಆರ್ ಸಿಬಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
 

ಮ್ಯಾಕ್ಸ್ ವೆಲ್ ಕಳೆದ ಐಪಿಎಲ್ ನಲ್ಲೂ ಕಳಪೆ ಆಟವಾಡಿ ಟೀಕೆಗೊಳಗಾಗಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲೂ ಮ್ಯಾಕ್ಸ್ ವೆಲ್ ಕೇವಲ 1 ರನ್ ಗೆ ಔಟಾಗಿದ್ದು ನೋಡಿ ನೆಟ್ಟಿಗರು ಆರ್ ಸಿಬಿಯ 14 ಕೋಟಿ ಹಳ್ಳಕ್ಕೆ ಬಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನು ಕೆಲವರು ಮ್ಯಾಕ್ಸ್ ವೆಲ್ ವಿಫಲರಾಗಿದ್ದಕ್ಕೇ ಆರ್ ಸಿಬಿ ಅವರ ಮೇಲೆ ದುಡ್ಡು ಸುರಿದಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :