ಕೊರೋನಾ ಸಂಕಷ್ಟಕ್ಕೆ ಭಾರೀ ದೇಣಿಗೆ ನೀಡಿದ ಶಿಖರ್ ಧವನ್, ಸಚಿನ್ ತೆಂಡುಲ್ಕರ್

ಮುಂಬೈ| Krishnaveni K| Last Modified ಶನಿವಾರ, 1 ಮೇ 2021 (07:43 IST)
ಮುಂಬೈ: ಭಾರತದಲ್ಲಿ ಕೊರೋನಾ ಸಂಕಷ್ಟ ಪರಿಸ್ಥಿತಿಗೆ ಮರುಗಿ ಕ್ರಿಕೆಟಿಗರಾದ ಶಿಖರ್ ಧವನ್, ಸಚಿನ್ ತೆಂಡುಲ್ಕರ್ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ.

 
ಶಿಖರ್ ಧವನ್ ತಾವು 20 ಲಕ್ಷ ರೂ. ಜೊತೆಗೆ ಐಪಿಎಲ್ ನಲ್ಲಿ ಆಡುವಾಗ ಸಿಗುವ ಎಲ್ಲಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಮೊತ್ತವನ್ನೂ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಸುರಕ್ಷತೆ ಕಾಪಾಡುವಂತೆ ಸುದೀರ್ಘ ಸಂದೇಶ ನೀಡಿದ್ದಾರೆ.
 
ಇನ್ನು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ಚ್ಯಾರಿಟಿಯೊಂದರ ಮೂಲಕ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಆದರೆ ಅವರು ನೀಡಿದ ಮೊತ್ತ ಬಹಿರಂಗಪಡಿಸಿಲ್ಲ. ಆದರೆ ಈ ಸಂಕಷ್ಟ ಸ್ಥಿತಿಯಲ್ಲಿ ನೀವೂ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :