ಐಪಿಎಲ್ ಗೆ ಹೊರಟ ತಂದೆಯನ್ನು ಮುದ್ದು ಮಾಡಿ ಕಳುಹಿಸಿಕೊಟ್ಟ ವಾರ್ನರ್ ಪುತ್ರಿ

ಮುಂಬೈ| Krishnaveni K| Last Modified ಶುಕ್ರವಾರ, 2 ಏಪ್ರಿಲ್ 2021 (10:27 IST)
ಮುಂಬೈ: ರಲ್ಲಿ ಪಾಲ್ಗೊಳ್ಳಲು ಎಲ್ಲಾ ತಂಡಗಳ ಸದಸ್ಯರೂ ತಮ್ಮ ತಮ್ಮ ತಂಡದ ಜೈವ ಸುರಕ್ಷ ವಲಯಕ್ಕೆ ಬಂದಿಳಿಯುತ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್.

 
ಸನ್ ರೈಸರ್ಸ್‍ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್ 14 ರಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ತೆರಳುವ ಮುನ್ನ ಪುತ್ರಿಯ ಜೊತೆಗೆ ಕಳೆದ ಭಾವುಕ ಕ್ಷಣವನ್ನು ಅವರ ಪತ್ನಿ ಟ್ವೀಟ್ ಮಾಡಿದ್ದಾರೆ.
 
ಐಪಿಎಲ್ ಗೆ ತೆರಳುವ ಮುನ್ನ ವಾರ್ನರ್ ಗೆ ಪುತ್ರಿಯ ಪ್ರೀತಿಯ ಅಪ್ಪುಗೆಯ ಬೀಳ್ಕೊಡುಗೆ ಸಿಕ್ಕಿದೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಕ್ಯಾಂಡೈಸ್ ವಾರ್ನರ್ ‘ಬೈ ಡ್ಯಾಡೀ ವಿ ಲವ್ ಯೂ. ಹೈದರಾಬದ್ ರೆಡಿಯಾಗಿ, ವಾರ್ನರ್ ಬರ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :