ನಾಯಕತ್ವ ಕಿತ್ತುಕೊಂಡ ಬೆನ್ನಲ್ಲೇ ವಾರ್ನರ್ ಮತ್ತೊಂದು ಶಾಕ್ ಕೊಟ್ಟ ಹೈದರಾಬಾದ್

ಹೈದರಾಬಾದ್| Krishnaveni K| Last Modified ಸೋಮವಾರ, 3 ಮೇ 2021 (09:54 IST)
ಹೈದರಾಬಾದ್: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಒಂದು ದಿನ ಮೊದಲು ನಾಯಕತ್ವ  ಕಳೆದುಕೊಂಡ ಸನ್ ರೈಸರ್ಸ್ ತಂಡದ ಡೇವಿಡ್ ವಾರ್ನರ್ ಗೆ ಟೀಂ ಮ್ಯಾನೇಜ್ ಮೆಂಟ್ ಮತ್ತೊಂದು ಶಾಕ್ ಕೊಟ್ಟಿದೆ.
 

ರಾಜಸ್ಥಾನ್ ವಿರುದ್ಧದ ಆಡುವ ಬಳಗದಿಂದ ವಾರ್ನರ್ ರನ್ನು ಕೈ ಬಿಡುವ ಮೂಲಕ ಹೈದರಾಬಾದ್ ಮಾಜಿ ನಾಯಕನಿಗೆ ಶಾಕ್ ಕೊಟ್ಟಿದೆ. ಈ ಬಾರಿ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರದೇ ಇರುವುದೂ ಇದಕ್ಕೆ ಕಾರಣ.
 
ನಿನ್ನೆಯೇ ಈ ಬಗ್ಗೆ ಫ್ರಾಂಚೈಸಿ ಸುಳಿವು ನೀಡಿತ್ತು. ಇದೀಗ ಅದು ನಿಜವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಹೈದರಾಬಾದ್ ತಂಡ ವಿದೇಶೀ ಆಟಗಾರರ ಕಾಂಬಿನೇಷನ್ ಬದಲಾಯಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಸಮಜಾಯಿಷಿ ಕೊಟ್ಟಿದೆ.
ಇದರಲ್ಲಿ ಇನ್ನಷ್ಟು ಓದಿ :