ವೇಗದ ದೊರೆ ಉಸೇನ್ ಬೋಲ್ಟ್ ಆರ್ ಸಿಬಿ ಫ್ಯಾನ್

ಬೆಂಗಳೂರು| Krishnaveni K| Last Modified ಗುರುವಾರ, 8 ಏಪ್ರಿಲ್ 2021 (09:38 IST)
ಬೆಂಗಳೂರು: ವೇಗದ ದೊರೆ ಉಸೇನ್ ಬೋಲ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿ. ಹೀಗಾಗಿ ಆರ್ ಸಿಬಿ ಜೆರ್ಸಿ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ ಕೊಟ್ಟಿದ್ದಾರೆ.

 

ಉಸೇನ್ ಬೋಲ್ಟ್ ಫೋಟೋ ಜೊತೆಗೆ ‘ಚಾಲೆಂಜರ್ಸ್ ನೆನಪಿಡಿ, ಈಗಲೂ ನಾನೇ ವೇಗದ ಹುಲಿ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಮಗೆ ಗೊತ್ತು ನೀವೇ ವೇಗದ ದೊರೆ ಅಂತ. ಅದಕ್ಕೇ ನಿಮ್ಮನ್ನು ನಮ್ಮ ತಂಡಕ್ಕೆ ಬೆಂಬಲವಾಗಿ ನಿಲ್ಲಿಸಿದ್ದೇವೆ’ ಎಂದಿದ್ದಾರೆ.
 
ಇನ್ನು ಎಬಿಡಿ ವಿಲಿಯರ್ಸ್ ಕೂಡಾ ಪ್ರತಿಕ್ರಿಯಿಸಿದ್ದು, ನಮಗೆ ಎಕ್ಸ್ ಟ್ರಾ ಮೈಲೇಜ್ ಬೇಕೆಂದಾಗ ನಿಮ್ಮನ್ನೇ ಕರೆಯಿಸಿಕೊಳ್ಳುತ್ತೇವೆ ಎಂದು ತಮಾಷೆ ಮಾಡಿದ್ದಾರೆ. ನಾಳೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :