ಆರ್ ಸಿಬಿ ಪಾಳಯ ಸೇರಿಕೊಂಡ ಕಿಂಗ್ ಕೊಹ್ಲಿ

ಚೆನ್ನೈ| Krishnaveni K| Last Modified ಶುಕ್ರವಾರ, 2 ಏಪ್ರಿಲ್ 2021 (09:25 IST)
ಚೆನ್ನೈ: ರಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಚೆನ್ನೈಗೆ ಬಂದಿಳಿದಿದ್ದಾರೆ. ಕಿಂಗ್ ಕೊಹ್ಲಿ ಆಗಮನದ ಸುದ್ದಿಯನ್ನು ಸ್ವತಃ ಆರ್ ಸಿಬಿ ಟ್ವೀಟ್ ಮುಖೇನ ತಿಳಿಸಿದೆ.
 

ಚೆನ್ನೈನಲ್ಲಿ ಆರಂಭಿಕ ಪಂದ್ಯಗಳನ್ನಾಡಲಿರುವ ಆರ್ ಸಿಬಿ ತಂಡದ ಹೆಚ್ಚಿನ ಸದಸ್ಯರು ಈಗಾಗಲೇ ತಂಡವನ್ನು ಕೂಡಿಕೊಂಡಿದ್ದಾರೆ. ಇದೀಗ ಕೊಹ್ಲಿ ಕೂಡಾ ಬಯೋ ಬಬಲ್ ವಲಯಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನೊಬ್ಬ ಪ್ರಮುಖ ಆಟಗಾರ ಎಬಿಡಿ ವಿಲಿಯರ್ಸ್ ಕೂಡಾ ನಿನ್ನೆಯೇ ತಂಡಕ್ಕೆ ಸೇರ್ಪಡೆಯಾಗಿದ್ದರು.
 
ಮುಂದಿನ ಏಳು ದಿನಗಳ ಕಾಲ ಹೋಟೆಲ್ ರೂಂನಲ್ಲಿ ಕಳೆಯಲಿರುವ ಕೊಹ್ಲಿ ಬಳಿಕ ಅಭ್ಯಾಸಕ್ಕೆ ಮರಳಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಬಲ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಇದರಲ್ಲಿ ಇನ್ನಷ್ಟು ಓದಿ :