ಕ್ವಾಲಿಫೈಯರ್ ನಮ್ಮ ಮನಸ್ಸಲ್ಲಿಲ್ಲ, ಗೆಲ್ಲುವುದೇ ಗುರಿ: ವಿರಾಟ್ ಕೊಹ್ಲಿ

ದುಬೈ| Krishnaveni K| Last Modified ಸೋಮವಾರ, 11 ಅಕ್ಟೋಬರ್ 2021 (16:55 IST)
ದುಬೈ: ರಲ್ಲಾದರೂ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಗುರಿಯೇನೆಂದು ಬಹಿರಂಗಪಡಿಸಿದ್ದಾರೆ.
 > ಇಂದು ಸಂಜೆ ನಡೆಯಲಿರುವ ಎರಡನೇ ಪ್ಲೇ ಆಫ್ ಪಂದ್ಯದಲ್ಲಿ ಕೊಹ್ಲಿ ಬಳಗ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಬಗ್ಗೆ ಕೇಳಿದಾಗ ಕೊಹ್ಲಿ, ಕ್ವಾಲಿಫೈಯರ್, ಎಲಿಮಿನೇಟರ್ ನಮ್ಮ ತಲೆಯಲ್ಲೇ ಇಲ್ಲ. ಪ್ರತಿ ಪಂದ್ಯವನ್ನೂ ಗೆಲ್ಲಬೇಕೆಂಬುದಷ್ಟೇ ನಮ್ಮ ಗುರಿ ಎಂದಿದ್ದಾರೆ.>   ‘ಎಲ್ಲಾ ಸಾಧ‍್ಯತೆಗಳನ್ನೂ ಎದುರಿಸಲು ಸಿದ್ಧರಾಗಿದ್ದೇವೆ. ಕ್ರಿಕೆಟ್ ಆಡಲಿಳಿದಾಗ ಒಂದೋ ಗೆಲ್ಲಬೇಕು, ಇಲ್ಲವೇ ಸೋಲಬೇಕು. ಈ ಎರಡು ಮನಸ್ಸಲ್ಲಿಟ್ಟುಕೊಂಡು ಕಣಕ್ಕಿಳಿದರೆ ಋಣಾತ್ಮಕ ಚಿಂತೆ ಬಾರದು. ನಮ್ಮ ಗುರಿ ಗೆಲ್ಲುವುದಕ್ಕಾಗಿ ಆಡುವುದು. ಹಾಗಂತ ಗೆಲುವೊಂದನ್ನೇ ತಲೆಯಲ್ಲಿಟ್ಟುಕೊಂಡು ಆಡಿದರೆ ನಮ್ಮ ಪ್ರದರ್ಶನವೂ ಬೇರೇ ಲೆವೆಲ್ ನಲ್ಲಿರುತ್ತದೆ’ ಎಂದು ಕೊಹ್ಲಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :