ಮತ್ತೆ ಐಪಿಎಲ್ ಗೆ ಚೀನಾದ ವಿವೋ ಪ್ರಾಯೋಜಕತ್ವ

ಮುಂಬೈ| Krishnaveni K| Last Modified ಶುಕ್ರವಾರ, 19 ಫೆಬ್ರವರಿ 2021 (09:43 IST)
ಮುಂಬೈ: ಕ್ಕೆ ಮತ್ತೆ ಟೈಟಲ್ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೋ ಕಂಪನಿಯೇ ವಹಿಸಿಕೊಳ್ಳಲಿದೆ. ಕಳೆದ ಆವೃತ್ತಿಯ ವೇಳೆ ಭಾರತ-ಚೀನಾ ನಡುವಿನ ಸಂಘರ್ಷದಿಂದಾಗಿ ವಿವೋ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು.

 

ಕಳೆದ ಆವೃತ್ತಿಯ ವೇಳೆಗೆ ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ಮೇರೆ ಮೀರಿತ್ತು. ಹೀಗಾಗಿ ಅಭಿಮಾನಿಗಳು ಐಪಿಎಲ್ ಬಹಿಷ್ಕರಿಸುವ ಬೆದರಿಕೆಯಿಂದ ವಿವೋ ಪ್ರಾಯೋಜಕತ್ವದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿತ್ತು. ವಿವೋ ಬದಲು ಡ್ರೀಮ್ ಇಲೆವೆನ್ ಕಳೆದ ಬಾರಿಯ ಟೈಟಲ್ ಪ್ರಾಯೋಜಕತ್ವ ಪಡೆದಿತ್ತು. ಆದರೆ ಈ ಬಾರಿ ಮತ್ತೆ ವಿವೋ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :