ನಟಿ ತಮನ್ನಾ ಜೊತೆ ಫ್ಲೈಟ್ ನಲ್ಲಿ ವಿರಾಟ್ ಕೊಹ್ಲಿ?!

ಮುಂಬೈ| Krishnaveni K| Last Modified ಭಾನುವಾರ, 11 ಏಪ್ರಿಲ್ 2021 (10:30 IST)
ಮುಂಬೈ: ನಟಿ ತಮನ್ನಾ ಭಾಟಿಯಾ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಫೋಟೋವೊಂದು ಈಗ ನೆಟ್ಟಿಗರನ್ನು ಕನ್ ಫ್ಯೂಸ್ ಮಾಡಿದೆ.

 
ಕಾರಣ, ಈ ಫೋಟೋದಲ್ಲಿ ತಮನ್ನಾ ಪ್ರೈವೇಟ್ ಜೆಟ್ ನಲ್ಲಿ ಕುಳಿತಿದ್ದು, ಅವರ ಹಿಂದೆ ಇಬ್ಬರಿದ್ದಾರೆ. ಈ ಇಬ್ಬರ ಪೈಕಿ ಓರ್ವ ಯುವಕ ಥೇಟ್ ವಿರಾಟ್ ಕೊಹ್ಲಿಯನ್ನೇ ಹೋಲುತ್ತಿದ್ದಾನೆ. ಇದನ್ನು ನೋಡಿ ನೆಟ್ಟಿಗರು ನಿಮ್ಮ ಜೊತೆ ಪ್ರೈವೇಟ್ ಜೆಟ್ ನಲ್ಲಿ ವಿರಾಟ್ ಕೊಹ್ಲಿ ಯಾಕಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
 
ಹಿಂದೆ ತಮನ್ನಾ ಮತ್ತು ವಿರಾಟ್ ಡೇಟಿಂಗ್ ಮಾಡುತ್ತಿದ್ದರು ಎಂಬ ಗುಸು ಗುಸು ಇತ್ತು. ಇಬ್ಬರೂ ಜೊತೆಯಾಗಿ ಜಾಹೀರಾತೊಂದರಲ್ಲೂ ನಟಿಸಿದ್ದರು. ಹೀಗಾಗಿ ಈಗ ತಮನ್ನಾ ಫೋಟೋ ಭಾರೀ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :