ಕ್ರಿಸ್ ಗೇಲ್ ಜೊತೆ ಶರ್ಟ್ ಲೆಸ್ ಆದ ಯಜುವೇಂದ್ರ ಚಾಹಲ್

ಮುಂಬೈ| Krishnaveni K| Last Modified ಶನಿವಾರ, 1 ಮೇ 2021 (12:43 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿದ್ದ ಕ್ರಿಸ್ ಗೇಲ್ ಈಗ ಪಂಜಾಬ್ ಪರ ಆಡುತ್ತಿದ್ದಾರೆ. ಆದರೆ ಅವರು ಮತ್ತು ಆರ್ ಸಿಬಿ ಆಟಗಾರರ ನಡುವಿನ ಸ್ನೇಹ ಅದೇ ರೀತಿ ಇದೆ.

 
ಇದೀಗ ನಿನ್ನೆಯ ಪಂದ್ಯದ ಬಳಿಕ ಕ್ರಿಸ್ ಗೇಲ್ ಹಾಗೂ ಆರ್ ಸಿಬಿ ಆಟಗಾರ ಯಜುವೇಂದ್ರ ಚಾಹಲ್ ಶರ್ಟ್ ಲೆಸ್ ಆಗಿ ಮೈದಾನದಲ್ಲಿ ಜೊತೆಗೇ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫನ್ನಿ ಫೋಟೋ ಈಗ ವೈರಲ್ ಆಗಿದೆ.
 
ಈ ಹಿಂದೆ ಹಲವು ಬಾರಿ ಗೇಲ್-ಚಾಹಲ್ ಫನ್ನಿ ಫೋಟೋಗಳನ್ನು ಪ್ರಕಟಿಸಿ ತಾವು ಉತ್ತಮ ಗೆಳೆಯರು ಎಂದು ಸಾರಿದ್ದರು. ತಂಡ ಬೇರೆಯಾದರೂ ಈ  ಇಬ್ಬರು ಆಟಗಾರರ ಸ್ನೇಹ ಮಾತ್ರ ಉಳಿದಿದೆ ಎನ್ನುವುದಕ್ಕೆ ಇದೇ ಸಾಕ್ಷಿ.
ಇದರಲ್ಲಿ ಇನ್ನಷ್ಟು ಓದಿ :