ಏರ್ಟೆಲ್ ನಿಂದ ಗ್ರಾಹಕರಿಗೆ 5 ಭರ್ಜರಿ ಹೊಸ ಪ್ರಿಪೇಡ್ ಆಫರ್ ಗಳು

ಬೆಂಗಳೂರು, ಶುಕ್ರವಾರ, 9 ನವೆಂಬರ್ 2018 (12:46 IST)

ಬೆಂಗಳೂರು : ಹಬ್ಬದ ಸಂದರ್ಭದಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ 5  ಭರ್ಜರಿ ಹೊಸ ಪ್ರಿಪೇಡ್ ಆಫರ್ ಗಳನ್ನು ಘೋಷಣೆ ಮಾಡಿದೆ.


ಏರ್ಟೆಲ್ ಮೊದಲ ರೀಚಾರ್ಜ್ ಕೂಪನ್ (FRCs) ಗಳನ್ನು ರೂ. 178 ರಿಂದ 559 ವರೆಗೆ ಪ್ರಾರಂಭಿಸಿದೆ. ಇದು 28 ದಿನಗಳಿಂದ 90 ದಿನಗಳವರೆಗಿನ ಅವಧಿಯನ್ನು ಹೊಂದಿದೆ. ಈ FRC ಗಳು ಹೊಸ ಸಿಮ್ ಖರೀದಿಸುವ ಸಮಯದಲ್ಲಿ ಮಾತ್ರವೇ ಪಡೆದುಕೊಳ್ಳಬಹುದು ಅಥವಾ ಬೇರೆ ಅಪರೇಟರ್ ಗಳಿಂದ ಪೋರ್ಟ್ ಆಗಿ ಬಂದವರು ಈ ಸೌಲಭ್ಯ ಪಡೆಯಬಹುದು.


ಏರ್ಟೆಲ್ ಪರಿಚಯಿಸಿರುವ ಈ 5 ಪ್ರಿಪೇಡ್ ಯೋಜನೆಗಳಲ್ಲಿ ರೂ. 178 ಮೊದಲನೆಯದು. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅಪರಿಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಕರೆಗಳು, ಅನಿಯಮಿತ ರೋಮಿಂಗ್ ಸೌಲಭ್ಯ ಇರಲಿದೆ. ದಿನಕ್ಕೆ 100 ಉಚಿತ ರಾಷ್ಟ್ರೀಯ ಮತ್ತು ಸ್ಥಳೀಯ ಎಸ್ಎಂಎಸ್ ಮತ್ತು 3ಜಿ/4ಜಿ ವೇಗದ 1 ಜಿಬಿ ಡೇಟಾ ಕೂಡ ಸಿಗಲಿದೆ.
ಎರಡನೇಯದು ರೂ. 229 ಯೋಜನೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನಿಯಮಿತ ಕರೆಗಳು, ಅನಿಯಮಿತ ರೋಮಿಂಗ್ ಸೌಲಭ್ಯ ಹೊಂದಿದೆ. ದಿನಕ್ಕೆ 100 ಉಚಿತ ರಾಷ್ಟ್ರೀಯ ಮತ್ತು ಸ್ಥಳೀಯ ಎಸ್ಎಂಎಸ್ ನೀಡಲಿದೆ. ಹೆಚ್ಚಿನದಾಗಿ ಪ್ರತಿದಿನ 3ಜಿ/4ಜಿ ವೇಗದ 1.4GB ಡೇಟಾ ಸಿಗಲಿದೆ.


ಮೂರನೇಯದು ರೂ344 ಯೋಜನೆ. ಇದು ಕೂಡ 28 ದಿನಗಳ ವ್ಯಾಲಿಡಿಟಯನ್ನು ಹೊಂದಿದ್ದು,  ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಮತ್ತು ರೋಮಿಂಗ್ ಕರೆಗಳು, ಪ್ರತಿದಿನ 100 ಉಚಿತ SMS ಇರುತ್ತದೆ. ಆದರೆ, ಪ್ರತಿದಿನ 2 ಜಿಬಿ ಡೇಟಾ ಪಡೆಯಬಹುದು.


ನಾಲ್ಕನೇಯದು ರೂ. 495 ಯೋಜನೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1.4 ಜಿಬಿ ವರೆಗೆ 3G / 4G ಡೇಟಾವನ್ನು ನೀಡುತ್ತದೆ. ದಿನನಿತ್ಯ ಅನಿಯಮಿತ ಕರೆಗಳು ಹಾಗು ರೋಮಿಂಗ್ ಸೇರಿದಂತೆ 100 ಉಚಿತ SMS ಒದಗಿಸುತ್ತದೆ.
 ಕೊನೆಯದಾಗಿ, ರೂ. 559 ಯೋಜನೆಯು 90 ದಿನಗಳ ಮಾನ್ಯತೆ ಹೊಂದಿದೆ. ಇದು ಪ್ರತಿದಿನ 1.4 ಜಿಬಿ ವರೆಗೆ 3G /4G ಡೇಟಾವನ್ನು ನೀಡುತ್ತದೆ. ದಿನನಿತ್ಯ ಅನಿಯಮಿತ ಕರೆಗಳು ಹಾಗು ರೋಮಿಂಗ್ ಸೇರಿದಂತೆ 100 ಉಚಿತ SMS ಒದಗಿಸುತ್ತದೆ.
ಮೈ ಏರ್ಟೆಲ್ ಅಪ್ಲಿಕೇಶನ್ ಅಥವಾ ಏರ್ಟೆಲ್ ಅಧಿಕೃತ ವೆಬ್ಸೈಟ್ ಮೂಲಕ ಗ್ರಾಹಕರು ಈ ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ದೀಪಾವಳಿ ಹಬ್ಬದಂದು ಮತ್ತೆ ಇಳಿದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ

ನವದೆಹಲಿ : ಕಳೆದ ದಿನಗಳಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಇದೀಗ ...

news

ದೀಪಾವಳಿ ಹಬ್ಬದ ಉಡುಗೊರೆಯಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಐಡಿಯಾ

ಬೆಂಗಳೂರು : ಐಡಿಯಾ ಮತ್ತು ವೋಡಾಫೋನ್ ವಿಲೀನದ ನಂತರ ಗ್ರಾಹಕರಿಗೆ ಉತ್ತಮ ಆಫರ್ ಗಳನ್ನು ನೀಡುತ್ತಿದ್ದು, ...

news

ಕೊಳಕಾದ, ಬರೆದಿರುವ ನೋಟು ನಿಮ್ಮ ಬಳಿ ಇದ್ದರೆ ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ

ನವದೆಹಲಿ : ಇನ್ನುಮುಂದೆ ನಿಮ್ಮ ಬಳಿ ಇರುವ ನೋಟಿನಲ್ಲಿ ಏನೇನೋ ಬರೆದಿದ್ದರೆ ಅಥವಾ ಗಲಿಜಾಗಿದ್ದರೆ ಅದಕ್ಕಾಗಿ ...

news

ವರದಿಯ ಪ್ರಕಾರ ಅತಿ ಹೆಚ್ಚು ವೇಗದ 4ಜಿ ಡೌನ್ಲೋಡ್ ಸ್ಪೀಡ್ ಹೊಂದಿದ ಟೆಲಿಕಾಂ ಕಂಪೆನಿ ಯಾವುದು ಗೊತ್ತಾ?

ನವದೆಹಲಿ : ಟೆಲಿಕಾಂ ಕಂಪೆನಿಗಳ ನಡುವೆ ಆಫರ್ ಗಳ ವಿಚಾರದಲ್ಲಿ ಆಗಾಗ ಪೈಪೋಟಿ ನಡೆಯುತ್ತಿದೆ. ಆದರೆ ಇದೀಗ ...