Widgets Magazine

ತನ್ನ ಬ್ರಾಡ್ಬ್ಯಾಂಡ್ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದ ಏರ್ಟೆಲ್

ನವದೆಹಲಿ| pavithra| Last Modified ಶುಕ್ರವಾರ, 22 ಫೆಬ್ರವರಿ 2019 (09:08 IST)
ನವದೆಹಲಿ : ರಿಲಾಯನ್ಸ್ ಜಿಯೋ ಗಿಗಾಫೈಬರ್ ಗೆ ಟಕ್ಕರ್ ನೀಡಲು ಏರ್ಟೆಲ್ ತನ್ನ ಬ್ರಾಡ್ಬ್ಯಾಂಡ್ ನ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದೆ.


ರಿಲಾಯನ್ಸ್ ಜಿಯೋ ಗಿಗಾಫೈಬರ್ ನಿಂದ ಉಳಿದ ಟೆಲಿಕಾಂ ಕಂಪನಿಗಳಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಬಿಎಸ್‌ಎನ್‌ಎಲ್ ತನ್ನ ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಇದೀಗ ಏರ್ಟೆಲ್
ತನ್ನ ಬ್ರಾಡ್ಬ್ಯಾಂಡ್ ನ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದೆ.


ಏರ್ಟೆಲ್ ರೂ. 999 ಪ್ಲಾನ್ ಅಡಿಯಲ್ಲಿ ಗ್ರಾಹಕರಿಗೆ 250GB ಬ್ರಾಡ್ಬ್ಯಾಂಡ್ ಡೇಟಾವನ್ನು ನೀಡುತ್ತದೆ. ಭಾರತದಾದ್ಯಂತ ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗೆ ಉಚಿತ ಧ್ವನಿ ಕರೆಗಳನ್ನು ಒದಗಿಸುತ್ತದೆ. ಏರ್ಟೆಲ್ ಈ ಯೋಜನೆಯಲ್ಲಿ 1000GB ಬೋನಸ್ ಡೇಟಾವನ್ನು ನೀಡುತ್ತಿದೆ. ಏರ್ಟೆಲ್ ರೂ. 799 ಅಥವಾ ಅದಕ್ಕೂ ಮೇಲ್ಪಟ್ಟ ಯೋಜನೆಗಳಿಗೆ ಈ ಆಫರ್ ಕೊಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :