Widgets Magazine

ಏರ್ಟೆಲ್ ತನ್ನ ಗ್ರಾಹಕರಿಗೆ ನೀಡಿದೆ 195 ರೂಪಾಯಿಯ ಹೊಸ ಪ್ಲಾನ್

ಬೆಂಗಳೂರು| pavithra| Last Modified ಮಂಗಳವಾರ, 23 ಅಕ್ಟೋಬರ್ 2018 (10:22 IST)
ಬೆಂಗಳೂರು : ರಿಲಾಯನ್ಸ್ ಜಿಯೋದ 199 ರೂಪಾಯಿ ಪ್ಲಾನ್ ಹಾಗೂ ವೋಡಾಫೋನ್ ನ 199 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡಲು ಏರ್ಟೆಲ್ 195 ರೂಪಾಯಿ ಹೊಸ ಪ್ಲಾನ್ ಶುರು ಮಾಡಿದೆ.


ಏರ್ಟೆಲ್ ನ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.25 ಜಿಬಿ ಡೇಟಾ ದಂತೆ 35 ಜಿಬಿ ಡೇಟಾ ಸಿಗಲಿದೆ. ಹಾಗೇ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕರೆಗಳು ಉಚಿತವಾಗಿದ್ದು, ಯಾವುದೇ ಮಿತಿಯಿಲ್ಲ. ಗ್ರಾಹಕರಿಗೆ ಪ್ರತಿ ದಿನ ಈ ಯೋಜನೆಯಲ್ಲಿ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.


ಇದು 25 ದಿನಗಳ ವಾಲಿಡಿಟಿಯನ್ನು
ಹೊಂದಿದ್ದು, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕೇರಳದ ಪ್ರಿಪೇಡ್ ಗ್ರಾಹಕರು ಮಾತ್ರ ಇದರ ಲಾಭ ಪಡೆಯಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :