Widgets Magazine

ವಾಟ್ಸಪ್‌ ಬಳಕೆದಾರರಿಗೆ ಎಚ್ಚರಿಕೆಯ ಗಂಟೆ! ಇಂತಹ ವೈರಸ್‌ಗಳಿಂದ ದೂರವಿರಿ

ಬೆಂಗಳೂರು| Rajesh patil| Last Modified ಮಂಗಳವಾರ, 8 ಜನವರಿ 2019 (14:30 IST)
ಬೆಂಗಳೂರು: ಸಾಮಾಜಿಕ ಜಾಲ ತಾಣವಾದ ವಾಟ್ಸಪ್‌ನಲ್ಲಿ  ಹೊಸ ವೈರಸ್ ಬಂದಿದೆ. ಈ ವೈರಸ್ ಹೆಸರು ವಾಟ್ಸಪ್‌ ಗೋಲ್ಡ್ ಎನ್ನಲಾಗಿದೆ. ವಾಸ್ತವಿಕತೆಯಲ್ಲಿ ವಾಟ್ಸಪ್‌ ಗೋಲ್ಡ್ ನಕಲಿ ಸಂದೇಶವಾಗಿದೆ. ಈ ಸಂದೇಶದಲ್ಲಿ ವಾಟ್ಸಪ್‌ ಬಳಕೆದಾರರಿಗೆ ವಿಶೇಷ ಸೌಲಭ್ಯ ನೀಡುವ ಆಮಿಷವೊಡ್ಡಲಾಗುತ್ತದೆ. ವಾಟ್ಸಪ್‌ ಗೋಲ್ಡ್ ವಾಟ್ಸಪ್‌ನ ಅಪ್‌ಗ್ರೇಡ್ ಮಾಡಿದ ಸಂದೇಶ ಎನ್ನಲಾಗುತ್ತಿದೆ.
ವಾಟ್ಸಪ್‌ ಗೋಲ್ಡ್ ವೈರಸ್ ಸಂದೇಶದಲ್ಲಿ ಒಂದೇ ಬಾರಿಗೆ 1000 ಪಿಕ್ಚರ್ಸ್‌ಗಳನ್ನು ಕಳುಹಿಸಬಹುದಾಗಿದೆ ಹಾಗೂ ನಿಮಗೆ ಹೊಸ ಇಮೋಜಿ ದೊರೆಯಲಿದೆ. ನೀವು ಕಳುಹಿಸಿದ ಸಂದೇಶಗಳಾಗಲಿ ಅಥವಾ ಪಿಕ್ಚರ್ಸ್‌ಗಳಾಗಲಿ ಯಾವಾಗ ಬೇಕಾದರೂ ಡಿಲೀಟ್ ಮಾಡಬಹುದಾಗಿದೆ. ವಿಡಿಯೋ ಚಾಟ್ ಮಾಡುವ ಸೌಲಭ್ಯ ಕೂಡಾ ದೊರೆಯಲಿದೆ ಎಂದು ಆಮಿಷವೊಡ್ಡಲಾಗುತ್ತದೆ.
 
ವಾಟ್ಸಪ್‌ ಗೋಲ್ಡ್‌ ಸಂದೇಶಗಳು ನಿಮ್ಮ ಫೋನ್‌ನಲ್ಲಿದ್ದಲ್ಲಿ ವೈರಸ್ ನಿಮ್ಮ ಖಾಸಗಿ ಜೀವನದ ವಿವರಗಳನ್ನು ಕದಿಯುತ್ತದೆ
 
ವಾಟ್ಸಪ್‌ಗೋಲ್ಡ್ ಡೌನ್‌ನೋಡ್ ಮಾಡಲು ಲಿಂಕ್ ಕೊಡಲಾಗುತ್ತದೆ. ವಾಟ್ಸಪ್‌ ಬಳಕೆದಾರರು ಲಿಂಕ್ ಮೇಲೆ ಕ್ಲಿಕ್ ಮಾಡಿದಲ್ಲಿ ಈ ವೆಬ್‌ಸೈಟ್‌ನಲ್ಲಿ ತುಂಬಾ ವೈರಸ್‌ಗಳಿರುವುದರಿಂದ ಕರಪ್ಟ್ ಆದ ವೆಬ್‌ಸೈಟ್‌ಗೆ ನಿಮ್ಮ ಕೊಂಡೊಯ್ಯುತ್ತದೆ. ಅಲ್ಲಿಂದ ನಿಮ್ಮ ಖಾಸಗಿ ಜೀವನದ ವಿವರಗಳನ್ನು ಬಳಸಿಕೊಂಡು ವಂಚಿಸಲಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :