Widgets Magazine

ಗ್ರಾಹಕರಿಗೆ ರಿಲಯನ್ಸ್ ಜಿಯೋ ಕಡೆಯಿಂದ ಬಂಪರ್ ಆಫರ್

ಬೆಂಗಳೂರು| pavithra| Last Modified ಶುಕ್ರವಾರ, 19 ಅಕ್ಟೋಬರ್ 2018 (14:24 IST)
ಬೆಂಗಳೂರು : ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ವಾರ್ಷಿಕ ರೀಚಾರ್ಜ್ ಮತ್ತು ಡೇಟಾ ಪ್ಲಾನ್ ಗಳನ್ನು ನೀಡುತ್ತಿದೆ.


ಈ ಮೂಲಕ 1699 ರೂಪಾಯಿ ಕೊಟ್ಟು ವರ್ಷಕ್ಕೆ 547.5 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. ಅಷ್ಟೇ ಅಲ್ಲ. ದಿನಕ್ಕೆ 1.5 ಜಿಬಿ ಡೇಟಾ , ಅನ್ಲಿಮಿಟೆಡ್ ವಿಡಿಯೋ ಕಾಲ್ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಗಳನ್ನ ಉಚಿತವಾಗಿ ನೀಡುತ್ತಿದೆ. ಎಲ್ಲಾ ಜಿಯೋ ಆಪ್ ಗಳ ಸೇವೆಯೂ ಈ ಪ್ಲಾನ್ ನಲ್ಲಿ ಉಚಿತವಾಗಿ ದೊರೆಯಲಿದೆ.


ಅಲ್ಲದೇ ದೀಪಾವಳಿಯ ಕೊಡುಗೆಯಾಗಿ ಜಿಯೋ 100 ರೂಪಾಯಿಗಿಂತ ಹೆಚ್ಚು ರೀಚಾರ್ಜ್ ಮಾಡಿಸುವ ಎಲ್ಲಾ ಗ್ರಾಹಕರಿಗೂ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ನೀಡುತ್ತಿದೆ. ಆ ಆಫರ್ ಅಕ್ಟೋಬರ್‌ 18ರಿಂದ ನವೆಂಬರ್‌ 30ರವರೆಗೆ ಲಭ್ಯವಾಗಲಿದ್ದು, ಸುಮಾರು 45ದಿನಗಳ ಕಾಲ ಆಫರ್‌ ಗ್ರಾಹಕರಿಗೆ ಲಭ್ಯವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :