ಸೆಲೆಬ್ರಿಟಿ ಹಾಗೂ ಕಂಪೆನಿಗಳು ತಪ್ಪು ಜಾಹೀರಾತು ನೀಡಿದರೆ ಶಿಕ್ಷೆ ಖಚಿತ

ನವದೆಹಲಿ, ಶುಕ್ರವಾರ, 9 ಆಗಸ್ಟ್ 2019 (08:58 IST)

ನವದೆಹಲಿ : ಜನರನ್ನು ದಿಕ್ಕು ತಪ್ಪಿಸುವಂತಹ ಜಾಹೀರಾತುಗಳನ್ನು ಮಾಡಿದರೆ , ಅದರಲ್ಲಿ ನಟಿಸಿದ ಸೆಲೆಬ್ರಿಟಿ ಹಾಗೂ ಕಂಪೆನಿ ಇಬ್ಬರಿಗೂ ಶಿಕ್ಷೆ ವಿಧಿಸುವ ಗ್ರಾಹಕ ರಕ್ಷಣಾ ಮಸೂದೆ 2019 ನ್ನು ಲೋಕಸಭೆ ಹಾಗೂ ರಾಜ್ಯಸಭೆ ಅಂಗೀಕಾರ ಮಾಡಲಾಗಿದೆ.
ಇದರ  ಪ್ರಕಾರ ಜನರನ್ನು ಹಾದಿ ತಪ್ಪಿಸುವ ಜಾಹೀರಾತುಗಳನ್ನು ಪ್ರಚಾರ ಮಾಡಿದ್ದಕ್ಕೆ ಸೆಲೆಬ್ರಿಟಿ ಹಾಗೂ ಕಂಪೆನಿಗಳಿಗೆ 10 ಲಕ್ಷದವರೆಗೆ ದಂಡ ಹಾಗೂ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಅಲ್ಲದೇ ಈ ತಪ್ಪು ಪುನರಾವರ್ತನೆಯಾದರೆ 50 ಲಕ್ಷದವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಅವಕಾಶ ಮಸೂದೆಯಲ್ಲಿರುತ್ತದೆ. ಹಾಗೇ ಸೆಲೆಬ್ರಿಟಿಗಳು 1ರಿಂದ 3 ವರ್ಷದವರೆಗೆ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳದಂತೆ ನಿರ್ಬಂಧ ವಿಧಿಸಲು ಸಾಧ್ಯವಾಗುತ್ತದೆ.


ಈ ಮಸೂದೆಯಡಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ)ಸ್ಥಾಪಿಸಲಾಗುತ್ತದೆ. ಒಂದು ವೇಳೆ ಗ್ರಾಹಕರಿಗೆ ಕಂಪೆನಿಗಳು ಜಾಹೀರಾತಿನ ಮೂಲಕ ವಂಚಿಸುತ್ತಿರುವುದು ತಿಳಿದುಬಂದರೆ ಅದನ್ನು ತಪಾಸಣೆ ಮಾಡಲು ಮಹಾ ನಿರ್ದೇಶಕರು ಇರುತ್ತಾರೆ, ಅವರು ಕಂಪೆನಿ ಮತ್ತು ಸೆಲೆಬ್ರಿಟಿಗಳ ಮೇಲೆ ದಂಡ ವಿಧಿಸುತ್ತಾರೆ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಕ್ವಾಲಂ ಪ್ರೊಸೆಸರ್ ಬಳಸುತ್ತಿರುವ ಈ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ನವದೆಹಲಿ : ಇತ್ತೀಚೆಗಷ್ಟೇ ಸ್ಮಾರ್ಟ್‌ ಫೋನ್‌ ಗಳಿಗೆ ಮಾಲ್ವೇರ್ ವೈರಸ್ ಗಳಿಂದ ಸಮಸ್ಯೆ ಎದುರಾಗಿದೆ ...

news

ಗ್ರಾಹಕರಿಗೆ ವೋಡಾಫೋನ್ ಕಡೆಯಿಂದ ಬಂಪರ್ ಆಫರ್!

ನವದೆಹಲಿ : ವೋಡಾಫೋನ್ ಗ್ರಾಹಕರನ್ನು ಸೆಳೆಯಲು ತನ್ನ 225 ರೂ.ಗಳ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​ ನ್ನು ...

news

'ನ್ಯಾಷನಲ್​​ ಶಾಪಿಂಗ್​ ಡೇಸ್​' ಸೇಲ್​ ‘ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ ಫ್ಲಿಪ್​ಕಾರ್ಟ್

ನವದೆಹಲಿ : ಜನಪ್ರಿಯ ಆನ್ ಲೈನ್ ತಾಣವಾದ ಫ್ಲಿಪ್​ಕಾರ್ಟ್​ ತನ್ನ ಗ್ರಾಹಕರಿಗಾಗಿ 'ನ್ಯಾಷನಲ್​​ ಶಾಪಿಂಗ್​ ...

news

ಅಭಿನಂದನ್ ಪ್ರೀಪೇಯ್ಡ್ ಪ್ಲ್ಯಾನ್ ನ್ನು ಪರಿಷ್ಕರಿಸಿದ ಬಿ.ಎಸ್.ಎನ್.ಎಲ್.

ನವದೆಹಲಿ : ಬಿ.ಎಸ್.ಎನ್.ಎಲ್. ಇತ್ತೀಚೆಗೆ ಪರಿಚಯಿಸಿದ ಅಭಿನಂದನ್ ಎಂಬ ಪ್ರೀಪೇಯ್ಡ್ ಪ್ಲ್ಯಾನ್ ನ್ನು ಇದೀಗ ...