ಗ್ರಾಹಕರಿಗಾಗಿ ಟಾಪ್ ಅಪ್ ವೋಚರ್ ಗಳನ್ನು ಬಿಡುಗಡೆ ಮಾಡಿದ ಜಿ

ನವದೆಹಲಿ| pavithra| Last Updated: ಭಾನುವಾರ, 13 ಅಕ್ಟೋಬರ್ 2019 (14:29 IST)
ನವದೆಹಲಿ : ಔಟ್ ಗೋಯಿಂಗ್ ಕಾಲ್ ಗೆ ವಿಧಿಸಿ ಗ್ರಾಹಕರಿಗೆ ಶಾಕ್ ನೀಡಿದ ಜಿಯೋ ಇದೀಗ ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ.
ಇತರ ನೆಟ್ ವರ್ಕ್ ಗಳಿಗೆ ಗ್ರಾಹಕರು ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಿ ಗ್ರಾಹಕರ ಬೇಸರಕ್ಕೆ ಕಾರಣವಾಗಿದ್ದ ಜಿಯೋ ಇದೀಗ ಗ್ರಾಹಕರು ಮೊದಲ ರಿಚಾರ್ಜ್ ಮಾಡಿದ ವೇಳೆ ಇತರ ನೆಟ್ ವರ್ಕ್ ಗಳಿಗೆ ಮಾಡುವ 30 ನಿಮಿಷಗಳ ಕರೆಗೆ ಯಾವುದೇ ಶುಲ್ಕ ಇಲ್ಲವೆಂದು ತಿಳಿಸಿದೆ.   


ಅಲ್ಲದೇ ಜೀಯೋ ಗ್ರಾಹಕರಿಗಾಗಿ ಟಾಪ್ ಅಪ್ ವೋಚರ್ ಗಳನ್ನು ನೀಡಿದ್ದು, ಇದರಲ್ಲಿ 10 ರೂ ರಿಚಾರ್ಜ್ ಮಾಡಿದರೆ  ಇತರ ನೆಟ್ ವರ್ಕ್ ಗಳಿಗೆ 124 ನಿಮಿಷಗಳ ಕರೆ ಹಾಗೂ 1 ಜಿಬಿ ಡೇಟಾ ನೀಡಲಾಗುತ್ತದೆ. ಹಾಗೇ 20 ರೂ ರಿಚಾರ್ಜ್ ಮಾಡಿದರೆ  ಇತರ ನೆಟ್ ವರ್ಕ್ ಗಳಿಗೆ 249 ನಿಮಿಷಗಳ ಕರೆ ಹಾಗೂ 2 ಜಿಬಿ ಡೇಟಾ ದೊರೆಯಲಿದೆ. 50 ರೂ ರಿಚಾರ್ಜ್ ಮಾಡಿದರೆ  ಇತರ ನೆಟ್ ವರ್ಕ್ ಗಳಿಗೆ 656 ನಿಮಿಷಗಳ ಕರೆ ಹಾಗೂ 5 ಜಿಬಿ ಡೇಟಾ ಸಿಗಲಿದೆ.

ಇದರಲ್ಲಿ ಇನ್ನಷ್ಟು ಓದಿ :