Widgets Magazine

ರತನ್‌ ಟಾಟಾ ಕನಸಿನ ನ್ಯಾನೋ ಕಾರಿನ ಉತ್ಪಾದನೆ ಮತ್ತು ಮಾರಾಟ ಬಂದ್. ಕಾರಣವೇನು ಗೊತ್ತಾ?

ನವದೆಹಲಿ| pavithra| Last Modified ಶನಿವಾರ, 26 ಜನವರಿ 2019 (07:16 IST)
ನವದೆಹಲಿ : ರತನ್‌ ಟಾಟಾ ಅವರ ಕನಸಿನ ಕಾರಾದ ಉತ್ಪಾದನೆ ಮತ್ತು ಮಾರಾಟವನ್ನು 2020ರ ಎಪ್ರಿಲ್‌ನಿಂದ ನಿಲ್ಲಿಸಲಾಗುವುದು ಎಂದು ಟಾಟಾ ಮೋಟರ್ಸ್‌ ಕಂಪೆನಿ ಹೇಳಿದೆ.

ವಾಹನ ಸವಾರರ ಕಾರಿನ ಕನಸು ಈಡೇರಿಸುವ ಉದ್ದೇಶಕ್ಕೆ ರತನ್ ಟಾಟಾ ಕೇವಲ 1 ಲಕ್ಷ ರೂಪಾಯಿಗೆ ಈ ಕಾರನ್ನು 2009 ರಲ್ಲಿ ಭಾರತದ ಮಾರುಕಟ್ಟೆಗೆ ತಂದಿದ್ದರು. ಆದರೆ ಈ ವರ್ಷ ಜನವರಿಯಿಂದ ಕೆಲವೊಂದು ಸುರಕ್ಷಾ ಕ್ರಮಗಳು ಜಾರಿಗೆ ಬಂದಿವೆ. ಎಪ್ರಿಲ್‌ನಲ್ಲಿ ಪುನಃ ಇನ್ನಷ್ಟು ಕ್ರಮಗಳು ಜಾರಿಗೆ ಬರಲಿವೆ. ಅಕ್ಟೋಬರ್‌ನಿಂದ ಮತ್ತೆ ಹೊಸ ಸುರಕ್ಷಾ ಕ್ರಮಗಳು ಜಾರಿಗೆ ಬರಲಿವೆ. 2020ರ ಎಪ್ರಿಲ್‌ 1ರಿಂದ ಬಿಎಸ್‌-6 ಸಂಪೂರ್ಣವಾಗಿ ಜಾರಿಗೆ ಬರಲಿದೆ.


ಇದರಿಂದ ಎಲ್ಲ ಕಾರುಗಳ ನವೀಕರಣ ಸಾಧ್ಯವಿಲ್ಲ. ಇದಕ್ಕೆ ಅನುಗುಣವಾದ ಉತ್ಪನ್ನ ತರಲು ದೊಡ್ಡ ಮಟ್ಟದ ಹೂಡಿಕೆ ಅಗತ್ಯ ಇರುತ್ತದೆ. ಆದರೆ ಕಂಪೆನಿ ನ್ಯಾನೋ ಸುಧಾರಣೆಗಾಗಿ ಹಣ ಹೂಡುವ ಯಾವುದೇ ಯೋಜನೆ ಹೊಂದಿಲ್ಲ. ಆದ್ದರಿಂದ 2020 ರ ವೇಳೆಗೆ ಸಣ್ಣ ಕಾರಿನ ಉತ್ಪಾದನೆ ರದ್ದಾಗಲಿದೆ ಎಂದು ಕಂಪೆನಿ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್
ಡೌನ್
ಲೋಡ್ ಮಾಡಿಕೊಳ್ಳಿ.





ಇದರಲ್ಲಿ ಇನ್ನಷ್ಟು ಓದಿ :