Widgets Magazine

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಇದನ್ನು ಓದಿ!

ನವದೆಹಲಿ| Krishnaveni K| Last Modified ಮಂಗಳವಾರ, 2 ಅಕ್ಟೋಬರ್ 2018 (08:18 IST)
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ.


ಎಟಿಎಂ ಕಾರ್ಡುದಾರರು ಡ್ರಾ ಮಾಡಿಕೊಳ್ಳಬಹುದಾದ ಹಣದ ಮಿತಿಯನ್ನು ಮತ್ತಷ್ಟು ಕಡಿಮೆ ಮಾಡಿದ್ದು ಇನ್ನು ಮುಂದೆ ದಿನಕ್ಕೆ ಕೇವಲ 20 ಸಾವಿರ ರೂ. ಮಾತ್ರ ಡ್ರಾ ಮಾಡಬಹುದಾಗಿದೆ.


ಅ.1 ರಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಇದುವರೆಗೆ ಪ್ರತಿನಿತ್ಯ 40 ಸಾವಿರ ರೂ. ಡ್ರಾ ಮಾಡಿಕೊಳ್ಳಬಹುದಾಗಿತ್ತು. ಆದರೆ ಈ ಮಿತಿ ಇದೀಗ 20 ಸಾವಿರದಷ್ಟು ಕಡಿಮೆ ಮಾಡಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ವಂಚನೆ ಸಂಬಂಧಿತ ದೂರುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬ್ಯಾಂಕ್ ಈ ಕ್ರಮಕ್ಕೆ ಮುಂದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :