ತತ್ಕಾಲ್ ಟಿಕೆಟ್ ಬುಕಿಂಗ್... ಸಂಪೂರ್ಣ ವಿವರಣೆಗಳು

ಬೆಂಗಳೂರು, ಬುಧವಾರ, 13 ಮಾರ್ಚ್ 2019 (14:07 IST)

ಐಆರ್‌ಸಿಟಿಸಿ ಪ್ರಕಾರ.. ತತ್ಕಾಲ್ ಟಿಕೇಟ್ ಬುಕಿಂಗ್ ಅಡ್ವಾನ್ಸ್ ರಿಸರ್ವೇಶನ್ ಅವಧಿಯು ಎರಡು ದಿನದಿಂದ ಒಂದು ದಿನಕ್ಕೆ ಇಳಿಸಲಾಗಿದೆ. ಟ್ರೈನ್ ಹೊರಡುವ ದಿನಾಂಕದ ಹಿಂದಿನ ದಿನ ಮಾತ್ರವೇ ತತ್ಕಾಲ್ ಟಿಕೇಟ್ ಅನ್ನು ಬುಕಿಂಗ್ ಮಾಡಬಹುದಾಗಿದೆ.
ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಪ್ರಯಾಣಿಕರಿಗೆ ತತ್ಕಾಲ್ ಟಿಕೇಟ್ ಬುಕಿಂಗ್ ಸದುಪಯೋಗವನ್ನು ಒದಗಿಸುತ್ತಿರುವ ವಿಷಯ ತಿಳಿದು ಬಂದಿದೆ. ಪ್ರಯಾಣಿಕರು ಆನ್‌ಲೈನ್ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಇಲ್ಲವೇ ರೈಲ್ವೇ ಕೌಂಟರ್‌ಗಳಿಗೆ ಹೋಗಿ ತತ್ಕಾಲ್ ಟಿಕೇಟ್‌ಗಳನ್ನು ಬುಕಿಂಗ್ ಮಾಡಬಹುದಾಗಿದೆ.
 
ಐಆರ್‌ಸಿಟಿಸಿ ಪ್ರಕಾರ... ಟ್ರೈನ್ ಹೊರಡುವ ದಿನಾಂಕದ ಹಿಂದಿನ ದಿನ ಮಾತ್ರ ತತ್ಕಾಲ್ ಟಿಕೇಟ್ ಅನ್ನು ಬುಕಿಂಗ್ ಮಾಡಬಹುದು. ಏಸಿ ಕೋಚ್ (2ಎ, 3ಎ, ಸಿಸಿ, 3ಈ) ತತ್ಕಾಲ್ ವಿಂಡೋ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತದೆ. ನಾನ್ ಏಸಿ ಕೋಚ್‌ಗಳಿಗೆ (ಎಸ್ಎಲ್, ಎಫ್‌ಸಿ, 2ಎಸ್) ತತ್ಕಾಲ್ ವಿಂಡೋ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ.
 
ತತ್ಕಾಲ್ ಟಿಕೇಟ್ ಬುಕಿಂಗ್ ನಿರ್ಬಂಧನೆಗಳು..
 
1. ತತ್ಕಾಲ್ ಟಿಕೇಟ್‌ಗಳಲ್ಲಿ ಒಂದು ಪಿಎನ್‌ಆರ್ ಗೆ ಗರಿಷ್ಠ ನಾಲ್ಕು ಜನ ಪ್ಯಾಸೆಂಜರ್‌ಗಳಿಗೆ ಮಾತ್ರ ರಿಸರ್ವೇಶನ್ ಮಾಡಬಹುದಾಗಿದೆ.
2. ಕನ್‌ಫರ್ಮ್ ಆದ ತತ್ಕಾಲ್ ಟಿಕೇಟ್‌ಗಳನ್ನು ರದ್ದು ಮಾಡಿದರೆ ಯಾವುದೇ ರೀಫಂಡ್ ಹಣ ಬರುವುದಿಲ್ಲ. ವೇಯಿಂಟ್‌ಲಿಸ್ಟ್ ಇರುವ ತತ್ಕಾಲ್ ಟಿಕೇಟ್‍ಗಳನ್ನು ರದ್ದು ಮಾಡಿದರೆ ಸ್ವಲ್ಪ ಶುಲ್ಕವನ್ನು ವಸೂಲು ಮಾಡುತ್ತಾರೆ.
3. ಸ್ಲೀಪರ್ ಕ್ಲಾಸ್ ಟಿಕೇಟ್‌ಗೆ ಕನಿಷ್ಠ ರೂ. 100, ಗರಿಷ್ಠ ರೂ.200 ಶುಲ್ಕ ವಿಧಿಸಲಾಗುತ್ತದೆ. ಏಸಿ ಚೇರ್ ಕಾರ್ ಟಿಕೇಟ್‌ಗೆ ರೂ. 125 ರಿಂದ ರೂ. 225 ಶ್ರೇಣಿಯಲ್ಲಿ ಶುಲ್ಕ ವಸೂಲು ಮಾಡಲಾಗುತ್ತದೆ.
4. ರೈಲ್ವೆ ಕೌಂಟರ್‌ಗೆ ಹೋಗಿ ತತ್ಕಾಲ್ ಟಿಕೇಟ್ ಬುಕಿಂಗ್ ಮಾಡುವುದಾದರೆ ಯಾವುದಾದರೂ ದೃಢೀಕರಣ ಪತ್ರವನ್ನು ಹೊಂದಿರಬೇಕು.
5. ತತ್ಕಾಲ್ ಬುಕಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ಸಬ್ಸಿಡಿ ಇರುವುದಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

ನವದೆಹಲಿ : ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತಿ ದಿನ 1.5 ...

news

ಗ್ರಾಹಕರಿಗೊಂದು ಸಿಹಿಸುದ್ದಿ; ಫ್ಲಿಪ್ಕಾರ್ಟ್ ನಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಭಾರೀ ರಿಯಾಯಿತಿ

ನವದೆಹಲಿ : ಗ್ರಾಹಕರನ್ನು ಸೆಳೆಯಲು ಫ್ಲಿಪ್ಕಾರ್ಟ್ ಆಸೂಸ್ ಓಎಂಜಿ ಡೇಸ್ ಸೇಲ್ ಶುರು ಮಾಡಿದ್ದು, ಇದರಲ್ಲಿ ...

news

ನಿಗದಿತ ಬ್ಯಾಲೆನ್ಸ್ ಇಲ್ಲದೆ ಎಟಿಎಂ ಕಾರ್ಡ್ ಬಳಸುವ ಎಸ್‌.ಬಿ.ಐ ಗ್ರಾಹಕರೇ ಎಚ್ಚರ

ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌.ಬಿ.ಐ.) ತನ್ನ ಎಟಿಎಂ ...

news

ರಫ್ತುದಾರ ಸಂಸ್ಥೆಗಳ ವಿರುದ್ಧ ದೂರು ನೀಡಿದ ಬಾಬಾ ರಾಮದೇವ್ ಪತಂಜಲಿ ಕಂಪೆನಿ

ನವದೆಹಲಿ : ಬಾಬಾ ರಾಮದೇವ್ ಅವರ ಕಂಪೆನಿ ತಮ್ಮ ಪತಂಜಲಿ ಆಯುರ್ವೇದ ಉತ್ಪನ್ನಗಳ ಬ್ರ್ಯಾಂಡ್ ನ್ನು ದುರ್ಬಳಕೆ ...