Widgets Magazine

ಅಂಚೆ ಕಚೇರಿಯಲ್ಲಿ ಇ-ಕಾಮರ್ಸ್ ಪೋರ್ಟಲ್ ಶುರು ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ| pavithra| Last Modified ಭಾನುವಾರ, 4 ಆಗಸ್ಟ್ 2019 (08:59 IST)
ನವದೆಹಲಿ : ಆನ್ಲೈನ್ ಮಾರುಕಟ್ಟೆಯಲ್ಲಿ ಜನರಿಗೆ ಮೋಸವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ  ಅಂಚೆ ಕಚೇರಿಯಲ್ಲಿ ಇ-ಕಾಮರ್ಸ್ ಪೋರ್ಟಲ್ ಶುರು ಮಾಡಲಿದ್ದು, ಆ ಮೂಲಕ ಯಾವುದೇ ಮೋಸವಿಲ್ಲದೆ ದೊಡ್ಡ ಮತ್ತು ಸಣ್ಣ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿದೆ.
ಬಟ್ಟೆ,‌ ಗೃಹ ಉಪಯೋಗಿ ವಸ್ತುಗಳು  ಸೇರಿದಂತೆ ಅನೇಕ ವಸ್ತುಗಳು ಈ ಫ್ಲಾಟ್ ಫಾರ್ಮ್ ನಲ್ಲಿ ಸಿಗಲಿವೆ. ಆದಕಾರಣ ವಿವಿಧ ಕಂಪನಿಗಳು ಹಾಗೂ ಮಾರಾಟಗಾರರ ನೋಂದಣಿ ಕಾರ್ಯ ಕೂಡ ಶುರುವಾಗಿದೆ. ಅಲ್ಲದೇ ಪೋಸ್ಟ್ ಆಫೀಸ್ ಪೋರ್ಟಲ್ ನಲ್ಲಿ ಖರೀದಿ ಮಾಡಿದ ವಸ್ತುಗಳನ್ನು ಅಂಚೆ ಕಚೇರಿ ಮೂಲಕ ಗ್ರಾಹಕರಿಗೆ ತಲುಪಿಸಲಾಗುವುದು.


ಹಾಗೇ ಇದಕ್ಕೆ ಯಾವುದೇ ಡೆಲಿವರಿ ಚಾರ್ಜ್ ಇರುವುದಿಲ್ಲ. ಕ್ಯಾಶ್ ಆನ್ ಡೆಲಿವರಿ ಸೇರಿದಂತೆ ರಿಟರ್ನ್ ವ್ಯವಸ್ಥೆಯೂ ಇರುತ್ತದೆ. ಕಂಪನಿಗಳು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :