Widgets Magazine

ವಿಸ್ಕಿ ಬಾಟಲ್‌ ಮಾರಾಟವಾಗಿರೋ ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಬೊನ್​​​ಹಮ್ಸ್| Jagadeesh| Last Modified ಗುರುವಾರ, 4 ಅಕ್ಟೋಬರ್ 2018 (14:48 IST)

ವಿಸ್ಕಿ ಬಾಟಲ್ ಬೆಲೆ ಎಂದರೆ ನೂರು, ಸಾವಿರ, ಲಕ್ಷಗಳಲ್ಲಿ ಆಗಿರೋದನ್ನು ಕಂಡಿದ್ದೀರಾ, ಕೇಳಿದ್ದೀರಾ. ಆದರೆ ಕೋಟ್ಯಂತರ ಬಬೆಲೆಗೆ ಮಾರಾಟ ವಾಗಿರುವ ವಿಸ್ಕಿ ಬಗ್ಗೆ ಇಲ್ಲಿದೆ ರಿಪೋರ್ಟ…


ವಿಸ್ಕಿ ಬಾಟಲೊಂದು 7 ಕೋಟಿ 33 ಲಕ್ಷದ 15 ಸಾವಿರದ 500 ರೂಪಾಯಿಗೆ (1.09 ಮಿಲಿಯನ್​​​​ ಡಾಲರ್)​​​ಮಾರಾಟ​ ಆಗುವ ಮೂಲಕ ದಾಖಲೆ ಬರೆದಿದೆ.


ಬೊನ್​​​ಹಮ್ಸ್​​​​​ನಲ್ಲಿ 60 ವರ್ಷದ ಮಖಲಾನ್​​​ ವಲೇರಿಯೋ ಅಡಾಮಿ 1926 ಎಂಬ ವಿಸ್ಕಿ ಬಾಟಲ್​​​ ಅತೀ ದುಬಾರಿ ಬೆಲೆಗೆ ಮಾರಾಟವಾಗಿದೆ. ಈ ಮೊದಲು ಹಾಕಾಂಗ್​​ನಲ್ಲಿ 8,14,081 ಪೌಂಡ್​​​ಗೆ ವಿಸ್ಕಿ ಬಾಟಲ್ಲೊಂದು ಮಾರಾಟವಾಗಿ ದಾಖಲೆ ಬರೆದಿತ್ತು.


ಆ ದಾಖಲೆಯನ್ನು ಸ್ಕಾಚ್‌ ವಿಸ್ಕಿ ಉಡೀಸ್‌ ಮಾಡಿದೆ. ಪೂರ್ವ ರಾಷ್ಟ್ರಗಳ ಜನತೆ ವಿಸ್ಕಿಯಲ್ಲಿ ಅತಿಯಾದ ಆಸಕ್ತಿಯನ್ನ ಹೊಂದಿದ್ದು, ಹೆಚ್ಚಾಗಿ ವಿಸ್ಕಿ ಪ್ರಿಯರಾಗಿದ್ದಾರೆ. ನಮ್ಮಲ್ಲಿ ಉತ್ಪಾದನೆಯಾಗುವ ಶೇಕಡಾ 40ರಷ್ಟು ವಿಸ್ಕಿಯ ಖರೀದಿದಾರರೂ ಪೂರ್ವ ರಾಷ್ಟ್ರಗಳಲ್ಲಿದ್ದಾರೆ ಎಂದು ಡ್ರಿಂಕ್​​ ಎಕ್ಸ್​ಪರ್ಟ್‌ ರಿಚರ್ಡ್​ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :