Widgets Magazine

ಈ ಕಾರ್ಡ್ ಬಳಸಿ ದೇಶದಾದ್ಯಂತ ಸಂಚರಿಸಬಹುದಂತೆ

ಬೆಂಗಳೂರು| pavithra| Last Modified ಸೋಮವಾರ, 3 ಜೂನ್ 2019 (06:48 IST)
ಬೆಂಗಳೂರು : ಸ್ಮಾರ್ಟ್ ಕಾರ್ಡ್ ಗಳನ್ನು ಮೆಟ್ರೋ ರೈಲಿನಲ್ಲಿ ಸಂಚರಿಸಲು ಮಾತ್ರ ಬಳಸಲಾಗುತ್ತಿತ್ತು. ಆದರೆ ಇನ್ನುಮುಂದೆ ದೇಶದಾದ್ಯಂತ ಸಂಚರಿಸಲು ಈ ಕಾರ್ಡ್ ಬಳಸಬಹುದಂತೆ.




ಹೌದು. ಈ ವಿಚಾರವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಸಿಎಂಡಿ ಎಂ.ವಿ. ಗೌತಮ್ ತಿಳಿಸಿದ್ದು, ಇನ್ನು ಮುಂದೆ ಒಂದೇ ಕಾರ್ಡ್ ಬಳಸಿ ಮೆಟ್ರೋ ರೈಲಿನಲ್ಲಿ,‌ ಬಸ್ ಗಳಲ್ಲಿ ಯಾವುದೇ ಸಾರಿಗೆಯಲ್ಲಾದರೂ ಸಂಚರಿಸಬಹುದು ಎಂದು ಹೇಳಿದ್ದಾರೆ.


ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮಿಷನ್ ಯೋಜನೆಯೊಂದನ್ನು ಘೋಷಿಸಿದ್ದು, ಇದರಡಿಯಲ್ಲಿ ಅನೇಕ ಸೇವೆಗಳಿಗೆ ಒಂದೇ ಸ್ಮಾರ್ಟ್ ಕಾರ್ಡ್ ಬಳಸುವ ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎನ್ನಲಾಗಿದೆ.





ಇದರಲ್ಲಿ ಇನ್ನಷ್ಟು ಓದಿ :