139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದ ವೋಡಾಫೋನ್

ನವದೆಹಲಿ, ಮಂಗಳವಾರ, 9 ಜುಲೈ 2019 (09:09 IST)

ನವದೆಹಲಿ : ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರ ಶುರುವಾಗಿದ್ದು, ಇದು ಏರ್‌ ಟೆಲ್ ಮತ್ತು ವೊಡಾಫೋನ್‌ ಗಳ ದರ ಪರಿಷ್ಕರಣೆಗೆ ಕಾರಣವಾಗಿದೆ . ಆದಕಾರಣ ಇದೀಗ ವೋಡಾಫೋನ್ ತನ್ನ 139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದೆ.
ಈ ಮೊದಲು ವೊಡಾಫೋನ್  139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ 5 GB ಡೇಟಾ ದೊರೆಯುತ್ತಿತ್ತು. ಆದರೆ ಇದೀಗ ವೋಡಾಫೋನ್ ತನ್ನ 139 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದ್ದು, ಈಗ ಕಂಪನಿಯು ಅದರಲ್ಲಿ 2GB ಇಳಿಸಿದೆ. ಅಂದರೆ ಈಗ ಬಳಕೆದಾರರಿಗೆ ಈ ಯೋಜನೆಯಲ್ಲಿ 3GB ಡೇಟಾವನ್ನು ನೀಡಲಾಗುವುದು.


ವೊಡಾಫೋನ್ ಬಳಕೆದಾರರಿಗೆ ಈಗ ಈ ಯೋಜನೆಯಲ್ಲಿ 3GB ಯ 4G / 3G ಡೇಟಾವನ್ನು ಪಡೆಯುವುದರ ಜೊತೆಗೆ ಸ್ಥಳೀಯ, ಎಸ್‌ ಟಿಡಿ ಮತ್ತು ರೋಮಿಂಗ್ ಕರೆಗಳು ಇರುತ್ತವೆ. ಈ ಯೋಜನೆಯಲ್ಲಿ 300 ಎಸ್‌ ಎಂಎಸ್ ಸಹ ಬಳಕೆದಾರರಿಗೆ ಲಭ್ಯವಾಗಲಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅಮರನಾಥ ಯಾತ್ರಾದಿಗಳಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ ಹೊಸ ಪ್ಲ್ಯಾನ್

ನವದೆಹಲಿ : ಅಮರನಾಥ ಯಾತ್ರಾದಿಗಳಿಗೆ ಅನುಕೂಲವಾಗುವಂತೆ ರಿಲಾಯನ್ಸ್ ಜಿಯೋ ಪ್ರೀಪೇಯ್ಡ್ ಪ್ಲಾನ್ ವೊಂದನ್ನು ...

news

ಗ್ರಾಹಕರಿಗಾಗಿ 148 ರೂ.ಗಳ ವಿಶೇಷವಾದ ಪ್ಲ್ಯಾನ್ ನ್ನು ಬಿಡುಗಡೆ ಮಾಡಿದ ಏರ್ಟೆಲ್

ನವದೆಹಲಿ : ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಆಫರ್ ಗಳನ್ನು ಬಿಡುಗಡೆ ಮಾಡುತ್ತಿದ್ದ ಏರ್ಟೆಲ್ ಇದೀಗ ತನ್ನ ...

news

ಯುಎಇಗೆ ಆಗಮಿಸುವ ಪ್ರವಾಸಿಗರಿಗೆ ಇವುಗಳು ಫ್ರೀಯಾಗಿ ಸಿಗಲಿದೆಯಂತೆ

ದುಬೈ : ಯಾವುದೇ ಒಂದು ಮೊಬೈಲ್, ಸಿಮ್ ಕಾರ್ಡ್ ಗಳನ್ನು ಖರೀದಿಸಲು ದಾಖಲೆಗಳನ್ನು ಕೊಡಲೇಬೇಕು. ಆದರೆ ...

news

ಬಜೆಟ್2019: ಮಧ್ಯಮ ವರ್ಗಕ್ಕೆ ಶಾಕ್ ನೀಡಿದ ಬಜೆಟ್

ನವದೆಹಲಿ: ಬಜೆಟ್ 2019: ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಪ್ರಧಾನಮಂತ್ರಿ ...