ಫೋರ್ಬ್ಸ್ ವಲ್ಡ್ರ್ಸ್ ಬೆಸ್ಟ್ ಬ್ಯಾಂಕ್ ಸರ್ವೇಯಲ್ಲಿ ಯಾವ ಬ್ಯಾಂಕ್ ಗೆ ಎಷ್ಟನೇ ಸ್ಥಾನ ಗೊತ್ತಾ?

ನವದೆಹಲಿ, ಶನಿವಾರ, 13 ಏಪ್ರಿಲ್ 2019 (10:17 IST)

ನವದೆಹಲಿ : ಫೋರ್ಬ್ಸ್ ಕಂಪನಿಯು ಸ್ಟಾಟಿಸ್ಟ ಎಂಬ ಕಂಪನಿ ಜೊತೆ ಸೇರಿ ಫೋರ್ಬ್ಸ್ ವಲ್ಡ್ರ್ಸ್ ಬೆಸ್ಟ್ ಬ್ಯಾಂಕ್ ಸರ್ವೇ ನಡೆಸಿದ್ದು, ಇದರಲ್ಲಿ ಎಚ್‍.ಡಿ.ಎಫ್‍.ಸಿ. ಭಾರತದ ನಂ. 1 ಬ್ಯಾಂಕ್ ಆಗಿ ಹೊರಹೊಮ್ಮಿದೆ.

ಫೋರ್ಬ್ಸ್ ಕಂಪನಿಯು 23 ದೇಶಗಳಲ್ಲಿ ಈ ಸರ್ವೇ ಮಾಡಿದ್ದು, ಬ್ಯಾಂಕ್‍‌ ನ ವಹಿವಾಟು, ಬ್ಯಾಲೆನ್ಸ್ ಶೀಟ್ ಇತ್ಯಾದಿಯನ್ನು ನೋಡದೆ ಜನರ ಅಭಿಪ್ರಾಯದ ಮೇರೆಗೆ ಈ ಸರ್ವೇ ಕೈಗೊಂಡಿದೆ. ನಂಬಿಕೆ, ಷರತ್ತು, ಗ್ರಾಹಕರ ಸೇವೆ, ಡಿಜಿಟಲ್ ಸರ್ವಿಸ್ ಹಾಗೂ ಆರ್ಥಿಕ ಸಲಹೆಗೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಿಸಿ ರ್ಯಾಂಕ್  ನೀಡಲಾಗಿದೆ.

 

ಇದರಲ್ಲಿ ಎಚ್‍.ಡಿ.ಎಫ್‍.ಸಿ. ನಂ. 1 ಸ್ಥಾನದಲ್ಲಿದ್ದರೆ, ಐಸಿಐಸಿಐ2  ಸ್ಥಾನದಲ್ಲಿ ಹಾಗೂ ಡಿಬಿಎಸ್ ಬ್ಯಾಂಕ್‍ 3 ನೇ ಸ್ಥಾನದಲ್ಲಿದೆ. ಉಳಿದಂತೆ ಸಿಂಡಿಕೇಟ್, ವಿಜಯಾ, ಪಿ.ಎನ್‍.ಬಿ., ಅಲಹಾಬಾದ್, ಆಕ್ಸಿಸ್ ಬ್ಯಾಂಕ್‍ ಗಳು ಟಾಪ್-10 ಪಟ್ಟಿಯಲ್ಲಿವೆ. ಅಲ್ಲದೇ ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಎಸ್‍.ಬಿ.ಐ.11ನೇ ಸ್ಥಾನದಲ್ಲಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಡೆಬಿಟ್ ಕಾರ್ಡ್ ನಿಂದ ಹಣ ಡ್ರಾ ಮಾಡಲು ಮಿತಿ ಹೇರಿದ ಎಸ್‌.ಬಿ.ಐ

ನವದೆಹಲಿ : ಡೆಬಿಟ್ ಕಾರ್ಡ್ ಬಳಕೆದಾರರು ಪ್ರತಿ ನಿತ್ಯ ಹಣ ಪಡೆದುಕೊಳ್ಳುವುದಕ್ಕೆ ಮಿತಿ ಹೇರುವುದರ ಮೂಲಕ ...

news

ಖಾತೆ ಹೊಂದಿರದಿದ್ದರೂ ಈ ಬ್ಯಾಂಕ್ ನಲ್ಲಿ ಸಿಗುತ್ತೆ ಎಟಿಎಂ ಕಾರ್ಡ್

ಬೆಂಗಳೂರು : ಸಾಮಾನ್ಯವಾಗಿ ಬ್ಯಾಂಕ್ ಗಳು ಖಾತೆ ಹೊಂದಿದ ಗ್ರಾಹಕರಿಗೆ ಮಾತ್ರ ಎಟಿಎಂ ಕಾರ್ಡ್ ನೀಡುತ್ತದೆ. ...

news

ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಇಲ್ಲಿದೆ ಸಿಹಿಸುದ್ದಿ

ಬೆಂಗಳೂರು : ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಬ್ಯಾಂಕ್ ವಲಯದಿಂದ ಸಿಹಿಸುದ್ದಿ. ಅದೇನೆಂದರೆ ...

news

ಫೇಸ್ ಬುಕ್ ಬಳಕೆದಾರರೇ ಎಚ್ಚರ! ಸಂಸ್ಥೆಯೇ ನಿಮ್ಮ ಡೇಟಾ,ಖಾಸಗಿ ಸಂದೇಶಗಳನ್ನು ಮಾರಾಟ ಮಾಡುತ್ತಿದೆಯಂತೆ

ನವದೆಹಲಿ : ಫೇಸ್ ಬುಕ್ ನಲ್ಲಿ ಬಳಕೆದಾರರು ಖಾಸಗಿ ಸಂದೇಶ ಕಳುಹಿಸುವ ಮುನ್ನ ಎಚ್ಚರಿಕೆಯಿಂದಿರಿ. ಯಾಕೆಂದರೆ ...