ಬೆಂಗಳೂರು: ಒಂದು ಕಾಲದಲ್ಲಿ ಮಾಲಾಶ್ರೀ ಜತೆಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ಸ್ಪುರದ್ರೂಪಿ ನಟ ಸುನಿಲ್ ನೆನಪಿರಬಹುದಲ್ಲವೇ? ಆ ನಟ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅಪಘಾತದಲ್ಲಿ ತೀರಿಕೊಂಡರು. ಆ ನಟನ ಬಗ್ಗೆ ಇದೀಗ ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ. ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನಟ ಜಗ್ಗೇಶ್, ತಾನು ಮತ್ತು ಸುನಿಲ್ ಉತ್ತಮ ಸ್ನೇಹಿತರಾಗಿದ್ದೆವು. ನನ್ನದೇ ಬೈಕ್ ನಲ್ಲಿ ಕೂರಿಸಿಕೊಂಡು ಅವಕಾಶಕ್ಕಾಗಿ ಅಲೆಯುತ್ತಿದ್ದೆ ಎಂದು ಹಳೆಯದನ್ನು ನೆನಪಿಸಿಕೊಂಡಿದ್ದಾರೆ.