ನಟ ಸಿದ್ಧಾರ್ಥ ಮೊಬೈಲ್ ಸಂಖ್ಯೆ ಸೋರಿಕೆ; ಕುಟುಂಬಕ್ಕೆ ನಿಂದನೆ ಮತ್ತು ಅತ್ಯಾಚಾರದ ಬೆದರಿಕೆ

ಚೆನ್ನೈ| pavithra| Last Updated: ಶುಕ್ರವಾರ, 30 ಏಪ್ರಿಲ್ 2021 (17:12 IST)
ಚೆನ್ನೈ : ತಮಿಳು ನಟ ಸಿದ್ಧಾರ್ಥ ಅವರ ಮೊಬೈಲ್ ಸಂಖ್ಯೆ ಸೋರಿಕೆಯಾಗಿದ್ದು, ಇದೀಗ ಅವರ ಕುಟುಂಬವು ನಿಂದನೆ , ಸಾವು ಮತ್ತು ಅತ್ಯಾಚಾರದ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದಾರೆ ಎನ್ನಲಾಗಿದೆ.

ಅಲ್ಲದೇ ನಟ ಬಿಜೆಪಿ ಪಕ್ಷದ ತಮಿಳುನಾಡು ಈಟಿ ಸೆಲ್ ತನ್ನ ಸಂಖ್ಯೆಯನ್ನು ಸೋರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ. ಕೊರೊನಾ 2ನೇ ಅಲೆ ನಿರ್ವಹಣೆಗಾಗಿ ಈ ಹಿಂದೆ ಸಿದ್ಧಾರ್ಥ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹಾಗಾಗಿ ನಟ ಟ್ವೀಟರ್ ನಲ್ಲಿ ಬಿಜೆಪಿಗೆ ಸಂಬಂಧಿಸಿದ ಎಲ್ಲಾ ಸಂಖ್ಯೆಗಳನ್ನು ದಾಖಲಿಸಲಾಗಿದೆ ಮತ್ತು ಗ್ರೇಟರ್ ಚೆನ್ನೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಮತ್ತು ಅದನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿ ನೀವು ಏನ್ ಬೇಕಾದರೂ ಮಾಡಿ ನಾನು ಸುಮ್ಮನಿರುವುದಿಲ್ಲ ಎಂದು ಸವಾಲು ಹಾಕಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :