ಮತ್ತೆ ಮದುವೆ ವಿಚಾರದಲ್ಲಿ ಸುದ್ದಿಯಾದ ನಟಿ ಅನುಷ್ಕಾ ಶೆಟ್ಟಿ

ಹೈದರಾಬಾದ್| pavithra| Last Modified ಭಾನುವಾರ, 2 ಮೇ 2021 (07:00 IST)
ಹೈದರಾಬಾದ್ : ಈ ಹಿಂದೆ ಸುದ್ದಿಯಲ್ಲಿದ್ದ ನಟಿ ಅನುಷ್ಕಾ ಅವರ ಮದುವೆ ವಿಚಾರ ಇದೀಗ ಮತ್ತೆ ಸುದ್ದಿಯಲ್ಲಿ ಬಂದಿದೆ.

ಈ ಹಿಂದೆ ನಟಿ ಅನುಷ್ಕಾ ಅವರು ಬಾಹುಬಲಿ ನಟ ಪ್ರಭಾಸ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು, ಬಳಿಕ ಅದನ್ನು ನಟಿ ನಿರಾಕರಿಸಿದ್ದಾರೆ. ಇದೀಗ ಮತ್ತೆ ಅವರ ಮದುವೆ ವಿಚಾರ ಸುದ್ದಿಗೆ ಬಂದಿದೆ. ಅವರು ತಮಗಿಂತ ಕಿರಿಯ ವಯಸ್ಸಿನ ದುಬೈ ಮೂಲದ ಉದ್ಯಮಿಯೊಂದಿಗೆ ಮದುವೆಯಾಗಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ.

ಈ ಬಗ್ಗೆ ನಟಿ ಅನುಷ್ಕಾ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಾಗಿ ಅವರು ಶೀಘ್ರದಲ್ಲಿಯೇ ಈ ವದಂತಿಗೆ ಬ್ರೇಕ್ ಹಾಕುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.



ಇದರಲ್ಲಿ ಇನ್ನಷ್ಟು ಓದಿ :