ಮೂಕುತಿ ಅಮ್ಮನ್ ಯಶಸ್ಸಿನ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ನಟಿ ನಯನತಾರಾ

ಚೆನ್ನೈ| pavithra| Last Modified ಸೋಮವಾರ, 11 ಜನವರಿ 2021 (19:53 IST)
ಚೆನ್ನೈ : ಮೂಕುತಿ ಅಮ್ಮನ್ ಅವರ ಯಶಸ್ಸಿನ ಬಳಿಕ ನಟಿ ನಯನತಾರಾ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಅವರು ತನ್ನ ಗೆಳೆಯ ವಿಘ್ನೇಶ್ ಶಿವನ್ ಅವರ ಕಾತುವಕ್ಕುಲಾರೆಂಡು ಕಾದಾಲ್ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ಸಮಂತಾ ನಟಿಸಿದ್ದಾರೆ. ಹಾಗೇ  ಅವರು ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಅನ್ನಥಾದಲ್ಲಿ ನಟಿಸುತ್ತಿದ್ದಾರೆ.

ಇದರ ನಡುವೆ ಇದೀಗ ನಟಿ ನಯನತಾರಾ ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಮಲಯಾಳಂ ಚಿತ್ರ ಲೂಸಿಫರ್ ಚಿತ್ರದ ರಿಮೇಕ್ ನಲ್ಲಿ ಚಿರಂಜೀವಿ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.  ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.ಇದರಲ್ಲಿ ಇನ್ನಷ್ಟು ಓದಿ :