ಕೋವಿಡ್ ಲಸಿಕೆಯ 2 ಡೋಸ್ ತೆಗೆದುಕೊಂಡಿದ್ದರೂ ಸೋಂಕಿಗೆ ಒಳಗಾದ್ರಾ ನಿರ್ಮಾಪಕ ಅಲ್ಲು ಅರವಿಂದ್ ?

ಹೈದರಾಬಾದ್| pavithra| Last Modified ಮಂಗಳವಾರ, 6 ಏಪ್ರಿಲ್ 2021 (14:26 IST)
ಹೈದರಾಬಾದ್ : ನಿರ್ಮಾಪಕ ಅಲ್ಲು ಅರವಿಂದ್ ಅವರು ಕೋವಿಡ್ ಲಸಿಕೆಯ ಎರಡು ಪ್ರಮಾಣವನ್ನು ತೆಗೆದುಕೊಂಡಿದ್ದರೂ ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಮಬ ವದಂತಿಗಳು ಕೇಳಿಬಂದಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ ಅಲ್ಲು ಅರವಿಂದ್ ಅವರು, ನಾನು ಕೋವಿಡ್ ಸೋಂಕಿಗೆ ಒಳಗಾಗಿರುವುದು ನಿಜ. ಆದರೆ  2 ಡೋಸ್ ಲಸಿಕೆ ತೆಗೆದುಕೊಂಡಿದ್ದೇನೆ ಎಂಬುದು ಸುಳ್ಳು. ನಾನು ಇಲ್ಲಿಯವರೆಗೆ ಒಂದು ಪ್ರಮಾಣವನ್ನು ಮಾತ್ರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಅಲ್ಲದೇ ನಾನು ಮತ್ತು ನನ್ನ ಇಬ್ಬರು ಸ್ನೇಹಿತರು ಹಳ್ಳಿಯೊಂದರಲ್ಲಿ ಭೇಟಿ ಮಾಡಿದ್ದೇವು. ಆದರೆ ನಾವಿಬ್ಬರು ಒಂದು ಡೋಸ್ ತೆಗೆದುಕೊಂಡಿದ್ದರೆ ಇನ್ನೊಬ್ಬ ಸ್ನೇಹಿತ ಯಾವುದೇ ಡೋಸ್ ತೆಗೆದುಕೊಂಡಿಲ್ಲ. ಹಾಗಾಗಿ ನಾವು ಮೂವರು ಸೋಂಕಿಗೆ ಒಳಗಾಗಿದ್ದೇವೆ. ನಾವು ಮೂವರು 3 ದಿನಗಳ ಕಾಲ ಸಣ್ಣ ಜ್ವರದಿಂದ ಬಳಲುತ್ತಿದ್ದೇವೆ ಎಂದು ತಿಳಿಸಿದ್ದಾರೆ.   ಇದರಲ್ಲಿ ಇನ್ನಷ್ಟು ಓದಿ :