‘ಮದಗಜ’ ಚಿತ್ರದ ನಾಯಕಿ ಯಾರೆಂಬ ಸಸ್ಪೆನ್ಸ್ ಕೊನೆಗೂ ಬಹಿರಂಗ

ಬೆಂಗಳೂರು| Krishnaveni K| Last Modified ಶನಿವಾರ, 15 ಫೆಬ್ರವರಿ 2020 (09:28 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾದ ನಾಯಕಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

 
ಸಿನಿಮಾದ ನಾಯಕಿ ಯಾರು ಎಂದು ಊಹಿಸಿ ಎಂದು ಚಿತ್ರತಂಡ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿತ್ತು. ಈಗ ನಾಯಕಿ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದು ಆಶಿಕಾ ರಂಗನಾಥ್ ಎಂದು ಬಹಿರಂಗಪಡಿಸಿದೆ.
 
ನಾಯಕಿಯ ಹಿಂಭಾಗದ ಫೋಟೋ ನೋಡಿ ಹಲವರು ರಶ್ಮಿಕಾ ಮಂದಣ್ಣ, ರಚಿತಾ ರಾಮ್, ಸಾನ್ವಿ ಶ್ರೀವಾಸ್ತವ್ ಎಂದೆಲ್ಲಾ ಊಹೆ ಮಾಡಿದ್ದರು. ಅಂತೂ ಈಗ ನಿಜವಾದ ನಾಯಕಿ ಯಾರು ಎಂದು ಗೊತ್ತಾಗಿದ್ದು, ಫೆಬ್ರವರಿ 20 ರಿಂದ ಮದಗಜ ಚಿತ್ರೀಕರಣ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :