ರೆಬಲ್ ಸ್ಟಾರ್ ಅಂಬಿ ಮಾಮನ ಮನೆಯಲ್ಲಿ ರಾಕಿಂಗ್ ಬೇಬಿ ಐರಾ ಯಶ್

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (09:33 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್ ರೆಬಲ್ ಸ್ಟಾರ್ ಅಂಬರೀಶ್ ಮನೆಗೆ ಭೇಟಿಯಿತ್ತ ಕ್ಷಣಗಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


 
ಯಶ್ ಮತ್ತು ರಾಧಿಕಾ ತಮ್ಮ ಮುದ್ದಿನ ಮಗಳನ್ನು ಇದೇ ಮೊದಲ ಬಾರಿಗೆ ಅಂಬರೀಶ್ ನಿವಾಸಕ್ಕೆ ಕರೆತಂದಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಮನೆಗೆ ಬಂದ ಪುಟಾಣಿ ಗೆಸ್ಟ್ ನಿಂದ ಅಂಬರೀಶ್ ಪತ್ನಿ ಸುಮಲತಾ ಖುಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಐರಾಗೆ ಸುಮಲತಾ ಉಡುಗೊರೆ ನೀಡಿ ಸಂಭ್ರಮಿಸಿದ್ದಾರೆ.
 
ಅಂಬರೀಶ್ ದಂಪತಿಗೆ ಯಶ್ ಆಪ್ತರಾಗಿದ್ದಾರೆ. ಅಂಬರೀಶ್ ಸಾವನ್ನಪ್ಪು ಮೊದಲು ಐರಾ ಇನ್ನೂ ಹುಟ್ಟಿರಲಿಲ್ಲ. ಹಾಗಿದ್ದರೂ ಯಶ್ ಮಗುವಿಗೆ ಮೊದಲೇ ತೊಟ್ಟಿಲೊಂದನ್ನು ಮಾಡಲು ಆರ್ಡರ್ ಕೊಟ್ಟಿದ್ದರು. ಅಂಬರೀಶ್ ಸಾವಿನ ಬಳಿಕ ಈ ತೊಟ್ಟಿಲು ರೆಡಿಯಾದ ಮೇಲೆ ಸ್ವತಃ ಸುಮಲತಾ ಯಶ್ ಮಗಳಿಗೆ ಈ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಗಾಗಿ ಕಿಚ್ಚ ಸುದೀಪ್ ಪಡೆಯಲಿರುವ ಸಂಭಾವನೆಯೆಷ್ಟು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಕನ್ನಡ 7 ನೇ ಆವೃತ್ತಿಗೆ ಇನ್ನೇನು ಎರಡೇ ದಿನ ಬಾಕಿಯಿದ್ದು ಈ ಶೋನಲ್ಲಿ ಪ್ರಮುಖ ...

news

ದಬಾಂಗ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಶರ್ಟ್ ಲೆಸ್ ಫೈಟ್ ಗೆ ಪ್ರೇರಣೆಯಾಗಿದ್ದು ಏನು ಗೊತ್ತಾ?

ಬೆಂಗಳೂರು: ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾದಲ್ಲಿ ವಿಲನ್ ಆಗಿ ನಟಿಸಿರುವ ಕಿಚ್ಚ ಸುದೀಪ್ ಶರ್ಟ್ ...

news

ಅಬ್ಬಾ ಕೊನೆಗೂ ಮುಕ್ತಾಯ ಕಾಣುತ್ತಿದೆ ಲಕ್ಷ್ಮೀ ಬಾರಮ್ಮಾ ಧಾರವಾಹಿ! ವೀಕ್ಷಕರ ನಿಟ್ಟುಸಿರು

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ಮುಕ್ತಾಯದ ಹಂತ ...

news

ನಾಗಿಣಿ ಧಾರವಾಹಿ ಮುಕ್ತಾಯ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಗೆ?

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರವಾಹಿ ಮುಕ್ತಾಯವಾಗುತ್ತಿದ್ದು, ...