ಬಿಗ್ ಬಾಸ್ ಕನ್ನಡ ಶೋನಲ್ಲಿ ಯಾರು ಇರ್ತಾರೆ ಎಂದು ನನಗೂ ಗೊತ್ತಿಲ್ಲ ಎಂದ ಕಿಚ್ಚ ಸುದೀಪ್

ಬೆಂಗಳೂರು, ಶುಕ್ರವಾರ, 11 ಅಕ್ಟೋಬರ್ 2019 (10:27 IST)

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 7 ಆರಂಭವಾಗಲು ಎರಡನೇ ದಿನ ಬಾಕಿಯಿರುವಾಗ ಕಲರ್ಸ್ ವಾಹಿನಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಬಾರಿಯ ಶೋನ ವಿಶೇಷತೆಗಳನ್ನು ಹೊರಹಾಕಿದೆ.


 
ಈ ಬಾರಿ ಬಿಗ್ ಬಾಸ್ ಶೋನಲ್ಲಿ ಒಟ್ಟು 15 ರ ಬದಲು 17 ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ ಸ್ಪರ್ಧಿಗಳು ಯಾರೆಲ್ಲಾ ಎಂಬ ಬಗ್ಗೆ ನನಗೂ ಗೊತ್ತಿಲ್ಲ ಎಂದು ಕಿಚ್ಚ ಹೇಳಿಕೊಂಡಿದ್ದಾರೆ.
 
‘ವಾಹಿನಿಯ ಗೌಪ್ಯತೆಯನ್ನು ನಾನು ಗೌರವಿಸುತ್ತೇನೆ. ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ ಎಂದು ನಾನೂ ಕೇಳಿಲ್ಲ. ಹಾಗಾಗಿ ನನಗೂ ಗೊತ್ತಿಲ್ಲ. ಎಲ್ಲರಂತೆ ನಾನೂ ಬಿಗ್ ಬಾಸ್ ಬಗ್ಗೆ ಉತ್ಸುಕನಾಗಿದ್ದೇನೆ. ವಿಜೇತರಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ. ಇಲ್ಲಿ ಹಣ ಗೆಲ್ಲುವುದಕ್ಕಿಂತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಸಿಗುವ ಜೀವನ ಅನುಭವ ಮುಖ್ಯವಾದುದು ಎಂಬುದು ನನ್ನ ಅನಿಸಿಕೆ’ ಎಂದು ಕಿಚ್ಚ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಶ್ಮಿಕಾ ಮಂದಣ್ಣ ಥರಾ ಲಿಪ್ ಲಾಕ್ ಮಾಡಲ್ಲ ಎಂದ ಹರಿಪ್ರಿಯಾ

ಬೆಂಗಳೂರು: ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದಲ್ಲಿ ನಟಿ ಹರಿಪ್ರಿಯಾ ಸೃಜನ್ ಲೋಕೇಶ್ ಜತೆಗೆ ಕಾಣಿಸಿಕೊಂಡಿರುವ ...

news

ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಇಂದಿನಿಂದ: ವಿಶ್ ಮಾಡಿದ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತ್ಯಂತ ಆಪ್ತ ಮಿತ್ರನೆಂದರೆ ಸೃಜನ್ ಲೋಕೇಶ್. ಸೃಜನ್ ನಿರ್ಮಿಸಿ ...

news

ಶ್ರೀಮುರಳಿ ಭರಾಟೆ ರಿಲೀಸ್ ಡೇಟ್ ಅನೌನ್ಸ್ ಆಯ್ತು

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದ ...

news

ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಹಬ್ಬ ಮಾಡಲು ಈ ಕಾರಣಗಳೇ ಸಾಕು!

ಬೆಂಗಳೂರು: ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಖುಷಿಪಡಲು ಸಾಕಷ್ಟು ಕಾರಣಗಳಿವೆ. ಕಲರ್ಸ್ ವಾಹಿನಿ ಮತ್ತು ಜೀ ...