ಬಿಗ್ ಬಾಸ್ ಕನ್ನಡ ಸೀಸನ್ 8 ಕ್ಕೆ ಮುಹೂರ್ತ ಫಿಕ್ಸ್

ಬೆಂಗಳೂರು| Krishnaveni K| Last Modified ಮಂಗಳವಾರ, 16 ಫೆಬ್ರವರಿ 2021 (09:27 IST)
ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಿಚ್ಚ ಸುದೀಪ್ ನಡೆಸಿಕೊಡಲಿರುವ ನೇ ಆವೃತ್ತಿಗೆ ಮುಹೂರ್ತ ಫಿಕ್ಸ್ ಆಗಿದೆ.
 

ಫೆಬ್ರವರಿ 28 ರಂದು ಸಂಜೆ 6.10 ಕ್ಕೆ ಬಿಗ್ ಬಾಸ್ ಕನ್ನಡ 8 ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ವಿಶೇಷ ಪ್ರೋಮೋ ಮೂಲಕ ಬಹಿರಂಗಪಡಿಸಿದ್ದಾರೆ. ಜ್ಯೋತಿಷಿಯ ವೇಷ ಧರಿಸಿ ಕಿಚ್ಚ ಸುದೀಪ್ ಬಿಗ್ ಬಾಸ್ ಗೆ ಮುಹೂರ್ತ ನೀಡುತ್ತಿರುವ ವಿಶಿಷ್ಟ ಪ್ರೋಮೋವನ್ನು ನಿನ್ನೆ ಸಂಜೆ ಹೊರಬಿಡಲಾಗಿದೆ. ಈ ಮೂಲಕ ಮತ್ತೆ ದೊಡ್ಮನೆ ಕತೆ ಶುರುವಾಗಲಿದೆ. ಆದರೆ ಸ್ಪರ್ಧಿಗಳು ಯಾರೆಲ್ಲಾ ಇರಲಿದ್ದಾರೆ ಎನ್ನುವುದು ಕೊನೆಯ ಕ್ಷಣವದರೆಗೂ ಸಸ್ಪೆನ್ಸ್ ಆಗಿರಲಿದೆ.
ಇದರಲ್ಲಿ ಇನ್ನಷ್ಟು ಓದಿ :