Widgets Magazine

ಬಾಲಿವುಡ್ ಗೆ ಬಿಗ್ ಶಾಕ್ : ಹೊಸ ಸಿನಿಮಾ ಆನ್ ಲೈನ್ ಸೋರಿಕೆ?

ಮುಂಬೈ| Jagadeesh| Last Modified ಬುಧವಾರ, 14 ಅಕ್ಟೋಬರ್ 2020 (21:21 IST)
ಲಾಕ್ ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಬಾಲಿವುಡ್ ಗೆ ಮತ್ತೊಂದು ಬಿಗ್ ಶಾಕ್ ಬಿದ್ದಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಟಿ ಕಿಯಾರಾ ಅಡ್ವಾಣಿ ನಟನೆಯ ಹೊಸ ಚಿತ್ರ ಲಕ್ಷ್ಮಿ ಬಾಂಬ್ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಗುಮಾನಿಗೆ ಕಾರಣವಾಗಿದೆ.

ಟ್ವಿಟ್ಟರ್ ಬಳಕೆದಾರರೊಬ್ಬರು ಲಕ್ಷ್ಮಿ ಬಾಂಬ್ ಸಿನಿಮಾ ನೋಡುವುದನ್ನು ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ ಅವರು ಟ್ವೀಟ್ ಅನ್ನು ಅಳಿಸಿದ್ದಾರೆ. ನಂತರ ಮತ್ತೊಂದು ಟ್ವೀಟ್ ಪೋಸ್ಟ್ ಮಾಡಿ ಸಿನಿಮಾವನ್ನು ಕಾನೂನು ಬದ್ಧವಾಗಿ ನೋಡಿ ಎಂದಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಲಕ್ಷ್ಮಿ ಬಾಂಬ್ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರವು ನವೆಂಬರ್ 9 ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಆದಾಗ್ಯೂ, ಚಿತ್ರದ ಆವೃತ್ತಿಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಇದು ಸಾಕಷ್ಟು ಆಘಾತಕಾರಿಯಾಗಿದೆ.

ಇದರಲ್ಲಿ ಇನ್ನಷ್ಟು ಓದಿ :