ಸುಮಲತಾ ಅಂಬರೀಶ್ ಸ್ಪರ್ಧೆಗೆ ಕಾಂಗ್ರೆಸ್-ಜೆಡಿಎಸ್ ಕಚ್ಚಾಡುತ್ತಿದ್ದರೆ ಶಾಕ್ ಕೊಡಲು ಬಿಜೆಪಿ ಸಿದ್ಧತೆ?!

ಬೆಂಗಳೂರು, ಶನಿವಾರ, 9 ಫೆಬ್ರವರಿ 2019 (09:10 IST)

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿಯುವಂತೆ ಅಭಿಮಾನಿಗಳು ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಚುನಾವಣಾ ಕಣಕ್ಕೆ ಧುಮುಕಲು ಮನಸ್ಸು ಮಾಡುತ್ತಿದ್ದಾರೆ.


 
ಆದರೆ ಸುಮಲತಾ ಸ್ಪರ್ಧೆಗೆ ಕಾಂಗ್ರೆಸ್ ದೋಸ್ತಿ ಪಕ್ಷ ಜೆಡಿಎಸ್ ನಿಂದ ವಿರೋಧವಿದೆ. ಆ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿಗೆ ತಮ್ಮ ಪುತ್ರ ನಿಖಿಲ್ ಕುಮಾರ್ ಸ್ವಾಮಿಯನ್ನು ಕಣಕ್ಕಿಳಿಸುವ ಇರಾದೆಯಿದೆ. ಇದರ ಜತೆಗೆ ಜೆಡಿಎಸ್ ನಾಯಕರು ಸುಮಲತಾ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಕಚ್ಚಾಡುತ್ತಿವೆ.
 
ಆದರೆ ಇಬ್ಬರ ನಡುವಿನ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಈ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಮಂಡ್ಯದಲ್ಲಿ ಪ್ರಭಾವ ಹೊಂದಿರುವ ಬಿಜೆಪಿ ನಾಯಕರಾದ ಸಿಪಿ ಯೋಗೇಶ್ವರ್ ಮತ್ತು ಅಂಬರೀಶ್ ಅವರಿಗೆ ಆಪ್ತರಾಗಿದ್ದ ಎಸ್ ಎಂ ಕೃಷ್ಣ ಮೂಲಕ ಸಂಧಾನ ನಡೆಸಿ ಸುಮಲತಾರನ್ನು ಬಿಜೆಪಿಗೆ ಸೆಳೆಯಲು ತೆರೆಮರೆಯ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ. ಇದರಲ್ಲಿ ಬಿಜೆಪಿ ಯಶಸ್ವಿಯಾದರೆ ದೋಸ್ತಿ ಪಕ್ಷಗಳಿಗೆ ನಿಜಕ್ಕೂ ಶಾಕ್ ಆಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಂಡ್ಯದ ಹೊಲದಲ್ಲಿ ಅಂಬರೀಶ್ ಅಮರ! ಮೂಕವಾಯಿತು ಸುಮಲತಾ ಹೃದಯ!

ಬೆಂಗಳೂರು: ಅಂಬರೀಶ್ ಎಂದರೆ ಮಂಡ್ಯ, ಮಂಡ್ಯ ಎಂದರೆ ಅಂಬರೀಶ್ ಎನ್ನುವ ಮಟ್ಟಿಗೆ ಅಲ್ಲಿನ ಜನರಿಗೆ ರೆಬಲ್ ...

news

ಸದ್ದಿಲ್ಲದೇ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಾಧಿಕಾ ಪಂಡಿತ್

ಬೆಂಗಳೂರು: ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿದ ಒಂದೇ ಒಂದು ಸಿನಿಮಾ ಆದಿಲಕ್ಷ್ಮಿ ಪುರಾಣ. ಅದೂ ...

news

ಕೆಜಿಎಫ್ ಚಾಪ್ಟರ್ 2 ಗಾಗಿ ಬಾಲಿವುಡ್ ನ ಈ ಸೂಪರ್ ಸ್ಟಾರ್ ಸ್ಯಾಂಡಲ್ ವುಡ್ ಗೆ ಬರ್ತಾರಾ?!

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಹೊಸ ಹವಾ ಎಬ್ಬಿಸಿದ ನಂತರ ಇದೀಗ ಕೆಜಿಎಫ್ 2 ಸಿನಿಮಾ ಬಗ್ಗೆ ಕುತೂಹಲ ...

news

ಮಗನ ಸಿನಿಮಾ ವಿಚಾರವಾಗಿ ಪೊಲೀಸರ ಮೊರೆ ಹೋದ ಅನಿತಾ ಕುಮಾರಸ್ವಾಮಿ!

ಬೆಂಗಳೂರು: ಪುತ್ರ ನಿಖಿಲ್ ಕುಮಾರಸ್ವಾಮಿ ನಾಯಕ ನಟನಾಗಿ ಅಭಿನಯಿಸಿದ ಸೀತಾರಾಮ ಕಲ್ಯಾಣ ಸಿನಿಮಾ ವಿಚಾರವಾಗಿ ...