Widgets Magazine

ಮಹಾರಾಷ್ಟ್ರ ಸಿಎಂಗೆ ಬಾಲಿವುಡ್ ನಟಿಯ ಸವಾಲ್ : ಬೆಚ್ಚಿ ಬಿದ್ದ ಶಿವಸೇನೆ

ಮುಂಬೈ| Jagadeesh| Last Modified ಗುರುವಾರ, 10 ಸೆಪ್ಟಂಬರ್ 2020 (11:01 IST)
ನಟ ಸುಶಾಂತ ಸಿಂಗ ರಜಪೂತ್ ಸಾವಿನ ಕೇಸ್ ಆರಂಭದಿಂದ ತೀವ್ರ ವಿವಾದ ಹಾಗೂ ಚರ್ಚೆಯಲ್ಲಿರುವ ನಟಿ ಕಂಗನಾ ರಣಾವತ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮುಂಬೈಗೆ ಬರುತ್ತಿದ್ದಂತೆ ನಟಿ ಕಂಗನಾ ರಣಾವತ್ ಮನೆ ಹಾಗೂ ಕಚೇರಿ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಕೆಡವಲಾಗಿದೆ.

ಇದರಿಂದಾಗಿ ಗರಂ ಆಗಿರುವ ನಟಿ ಕಂಗನಾ, ಮಹಾರಾಷ್ಟ್ರ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ವಿರುದ್ಧ ಟೀಕೆ ಮಾಡಿದ್ದು, ನಿಮ್ಮ ದುರಹಂಕಾರ ನಾಳೆ ಕೊನೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಕಾಶ್ಮೀರ ಹಾಗೂ ಅಯೋಧ್ಯೆ ಕುರಿತು ತಾವು ಸಿನಿಮಾ ಮಾಡೋದಾಗಿ ಘೋಷಣೆ ಮಾಡಿ ಮಹಾರಾಷ್ಟ್ರ ಸಿಎಂಗೆ ಸವಾಲ್ ಹಾಕಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :