ಬಾಲಿವುಡ್ ಮಾಫಿಯಾ : ಸೀಕ್ರೆಟ್ ವೈರಲ್ ಮಾಡಿದ ಯುವ ನಟಿ

ಮುಂಬೈ| Jagadeesh| Last Modified ಭಾನುವಾರ, 20 ಸೆಪ್ಟಂಬರ್ 2020 (18:14 IST)
ಬಾಲಿವುಡ್ ಯುವ ನಟಿಯೊಬ್ಬಳು ಅಲ್ಲಿನ ಮಾಫಿಯಾ ಬಗ್ಗೆ ಹೇಳಿರುವ ಸೀಕ್ರೆಟ್ ವೈರಲ್ ಆಗಿದೆ.

ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಬಳಿಕ ನೆಪೋಟಿಸಂ ಸದ್ದು ಜೋರಾಗಿ ಕೇಳಿಬರುತ್ತಿದೆ.

ಸ್ವಜನಪಕ್ಷಪಾತದ ಬಗ್ಗೆ ನಟಿ ತಾಪ್ಸಿ ಪನ್ನು ಮಾತನಾಡಿದ್ದು, ಸಿನಿಮಾ ರಂಗದ ಒಳಗಿನವರ ವಿರುದ್ಧ ಹೊರಗಿನವರ ಬಗ್ಗೆ ನಮಗೆ ಅಂತ್ಯವಿಲ್ಲದ ಚರ್ಚೆಗಳು ಕಾಣಸಿಗುತ್ತಿವೆ. ಆದರೆ ಯಾರಿಗೂ ನಿಜವಾದ ಪರಿಹಾರ ಸಿಕ್ಕಿಲ್ಲ ಎಂದಿದ್ದಾರೆ.

ಸಿನಿಮಾ ರಂಗದ ಹೊರಗಿನವರಾಗಿದ್ದರೂ ತಾಪ್ಸಿ ಪನ್ನು, ‘ಪಿಂಕ್’, ‘ಮನ್ಮಾರ್ಜಿಯಾನ್’, ‘ಥಪ್ಪಾಡ್’ ಮತ್ತು ಇತರ ಚಿತ್ರಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಬಾಲಿವುಡ್‌ನಲ್ಲಿ ಯಶಸ್ಸಿನ ಏಣಿಯತ್ತ ಸಾಗುತ್ತಿದ್ದಾರೆ.

ನೆಪೋಟಿಸಂ ಕುರಿತ ಚರ್ಚೆಗೆ ಕೊನೆ ಮೊದಲಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :