ಪೇಜಾವರ ಶ್ರೀಗಳ ಬೃಂದಾವನ ಮುಂದೆ ಹಂಸಲೇಖ ಕ್ಷಮೆ ಕೇಳಲು ಆಗ್ರಹ

ಬೆಂಗಳೂರು| Krishnaveni K| Last Modified ಬುಧವಾರ, 17 ನವೆಂಬರ್ 2021 (17:46 IST)
ಬೆಂಗಳೂರು: ದಲಿತರ-ಬಲಿತರ ವಿಚಾರದಲ್ಲಿ ಪೇಜಾವರ ಶ್ರೀಗಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ವಿರುದ್ಧ ಬ್ರಾಹ್ಮಣ ಮಹಾಸಭಾ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಹಂಸಲೇಖ ವಿರುದ್ಧ ದೂರು ನೀಡಿರುವ ಬ್ರಾಹ್ಮಣ ಮಹಾಸಭಾ ಕೇವಲ ನಾಲ್ಕು ಗೋಡೆಗಳ ಮಧ‍್ಯೆ ಕ್ಷಮೆ ಕೇಳಿದರೆ ಸಾಲದು. ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಪೇಜಾವರ ಶ್ರೀಗಳ ಬೃಂದಾವನಕ್ಕೆ ಬಂದು ಅದರ ಎದುರು ನಿಂತು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.


ಒಂದು ವೇಳೆ ಬಹಿರಂಗ ಕ್ಷಮೆ ಕೇಳದೇ ಹೋದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬ್ರಾಹ್ಮಣ ಮಹಾಸಭಾ ಎಚ್ಚರಿಸಿದೆ.


ಇದರಲ್ಲಿ ಇನ್ನಷ್ಟು ಓದಿ :