‘ಆ್ಯಂಟಿ ಇಂಡಿಯನ್’ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ ಸೆನ್ಸಾರ್ ಬೋರ್ಡ್

ಚೆನ್ನೈ| pavithra| Last Modified ಗುರುವಾರ, 8 ಏಪ್ರಿಲ್ 2021 (11:32 IST)
ಚೆನ್ನೈ : ಜನಪ್ರಿಯ ಯೂಟ್ಯೂಬ್ ವಿಮರ್ಶಕ ಮಾರನ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ  ‘ಆ್ಯಂಟಿ ಇಂಡಿಯನ್’ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಲು ನಿರಾಕರಿಸಿದೆ ಎನ್ನಲಾಗಿದೆ.

ಈ  ಚಿತ್ರ ಪಟ್ಟಿನಪಕ್ಕಂ ಮತ್ತು ಸುತ್ತಮುತ್ತ ಚಿತ್ರಖರಿಸಲ್ಪಟ್ಟಿದ್ದು, ಈ ಚಿತ್ರ ಇಂದಿನ ಜಗತ್ತಿನ ಧರ್ಮ ಮತ್ತು ರಾಜಕೀಯ ಜನರ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಹೇಳುತ್ತದೆ. ಹೀಗಾಗಿ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳು ಅಥವಾ ಸಂಭಾಷಣೆಗಳನ್ನು ಆಕ್ಷೇಪಿಸುತ್ತದೆ ಎಂದು ಚಿತ್ರತಂಡ ನಿರೀಕ್ಷಿಸಿದೆ. ಆದರೆ ಇಡೀ ಚಿತ್ರವನ್ನು ನಿರಾಕರಿಸಿದ್ದು ಅನಿರೀಕ್ಷಿತವಾಗಿದೆ ಎಂದು ನಿರ್ದೇಶಕ ಮಾರನ್ ಅವರು ಹೇಳಿದ್ದಾರೆ.

ಹೀಗಾಗಿ ಹೀಗಾಗಿ ಚಿತ್ರತಂಡ  ಎರಡು ವಾರಗಳಲ್ಲಿ  ರಿವೈಸಿಂಗ್ ಕಮಿಟಿಯನ್ನು ಸಂಪರ್ಕಿಸಲು ಯೋಜಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :