ತ್ರಿಶಾ ಮದುವೆ ಸುಳಿವು ನೀಡಿದ ನಟಿ ಚಾರ್ಮಿ

ಹೈದರಾಬಾದ್| pavithra| Last Modified ಶುಕ್ರವಾರ, 7 ಮೇ 2021 (09:16 IST)
ಹೈದರಾಬಾದ್ : ದಕ್ಷಿಣ ಭಾರತದ ಖ್ಯಾತ ನಟಿಯರಾದ ತ್ರಿಶಾ ಹಾಗೂ ಚಾರ್ಮಿ ಕೌರ್ ಅವರು ಉತ್ತಮ ಸ್ನೇಹಿತರು. ಇದೀಗ ನಟಿ ಚಾರ್ಮಿ ತ್ರಿಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ವೇಳೆ ವಿವಾಹದ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಹೌದು. ತ್ರಿಶಾ ಅವರ ಮದುವೆ ವಿಚಾರ ಇತ್ತೀಚೆಗೆ  ಹರಿದಾಡುತ್ತಿತ್ತು. ಆದರೆ ನಟಿ ತ್ರಿಶಾ ಅವರು ಇತ್ತೀಚೆಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಆ ವೇಳೆ ನಟಿ ಚಾರ್ಮಿ ಅವರಿಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ. ಇದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.> > ಚಾರ್ಮಿ ಅವರು ಟ್ವೀಟರ್ ನಲ್ಲಿ ತ್ರಿಶಾ ಅವರಿಗೆ ವಿಶ್ ಮಾಡುವಾಗ “ ಜನ್ಮ ದಿನದ ಸಂತೋಷದಲ್ಲಿರುವ ತರುಣಿಗೆ ಇದು ಬ್ಯಾಚಲರ್ ಲೈಫ್ ನ ಕೊನೆಯ ಜನ್ಮ ದಿನ ಎಂಬ ಬಲವಾದ ಭಾವನೆ ನನಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ತ್ರಿಶಾ ಅವರು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :