ನಟ ವಿಷ್ಣು ವಿಶಾಲ್ ತಂದೆಯ ವಿರುದ್ಧ ವಂಚನೆ ದೂರು ದಾಖಲಿಸಿದ ಹಾಸ್ಯ ನಟ ಸೂರಿ

ಚೆನ್ನೈ| pavithra| Last Modified ಸೋಮವಾರ, 12 ಅಕ್ಟೋಬರ್ 2020 (14:13 IST)
ಚೆನ್ನೈ : ತಮಿಳು ಹಾಸ್ಯ ನಟ ಸೂರಿ ಅವರು ತಮಿಳು ಖ್ಯಾತ ನಟ ವಿಷ್ಣು ವಿಶಾಲ್ ತಂದೆಯ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ನಟ ವಿಷ್ಣು ವಿಶಾಲ್ ಅವರ ತಂದೆ ರಮೇಶ್ ಕುಡುವ್ಲಾ ಹಾಗೂ ನಿರ್ಮಾಪಕ ಅನ್ಬುವೆಲ್ ರಾಜನ್ ಅವರು ನನಗೆ 2 ಕೋಟಿ 70 ಲಕ್ಷ ರೂ ವಂಚಿಸಿದ್ದಾರೆ. ನನಗೆ ಬರಬೇಕಾಗಿದ್ದ ಸಂಭಾವನೆ ಹಣ ಹಾಗೂ ಕಥೆ ಖರೀದಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ.> > ಈ ಬಗ್ಗೆ ಪ್ರತಿಕ್ರಿಯಿಸಿದ ನಟ ವಿಷ್ಣು ವಿಶಾಲ್ ಅವರು, ನಟ ಸೂರಿ ಅವರು ಕೈರಿಮಾನ್ ಪರಂಬರೈ ಚಿತ್ರಕ್ಕಾಗಿ ಪಡೆದ ಮುಂಗಡ ಹಣವನ್ನು ಹಿಂದಿರುಗಿಸಲಿಲ್ಲ. ಾದರೆ ನಾವು ಅದನ್ನು ಕೇಳಿಲ್ಲ. ನಮಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಮಬಿಕೆ ಇದೆ, ಮತ್ತು ಸತ್ಯ ಹೊರಗೆ ಬಂದೇಬರುತ್ತದೆ. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು ಎಂದು ಮನವಿ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :