ಕೊರೊನಾ ಹಿನ್ನಲೆ; ‘ಸೂರ್ಯ 40’ ಚಿತ್ರದ ಈ ಯೋಜನೆ ರದ್ದು

ಚೆನ್ನೈ| pavithra| Last Modified ಗುರುವಾರ, 29 ಏಪ್ರಿಲ್ 2021 (15:40 IST)
ಚೆನ್ನೈ : ಸೂರ್ಯ ಅವರು ಕೋವಿಡ್ 19ರಿಂದ ಚೇತರಿಸಿಕೊಂಡ ನಂತರ ಪಾಂಡಿರಾಜ್ ನಿರ್ದೆಶನದ ತಮ್ಮ ಮುಂದಿನ ಚಿತ್ರ ‘ಸೂರ್ಯ 40’ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಿದ್ದರು.

ಈ ಚಿತ್ರದ ಸೆಟ್ ಗಳಿಂದ ಈ ಹಿಂದೆ ಬಿಡುಗಡೆಯಾದ ಚಿತ್ರಗಳಲ್ಲಿ ಸೂರ್ಯ ಎರಡು ವಿಭಿನ್ನ ಆಯುಧಗಳ ಜೊತೆಗೆ ಕಾಣಿಸಿಕೊಂಡಿದ್ದರು ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಕೊರೊನಾ ಕಾರಣದಿಂದ ಅಪಾರ ಜನಸಂದಣಿಯೊಂದಿಗೆ ಆಕ್ಷನ್  ದೃಶ್ಯವನ್ನು ಚಿತ್ರೀಕರಿಸುವ ಯೋಜನೆಯನ್ನು ಪಾಂಡಿರಾಜ್ ಕೈಬಿಟ್ಟಿದ್ದಾರೆ.

ಪಾಂಡೀರಾಜ್ ಅವರು ಸುಮಾರು 100 ಜನರನ್ನು ಒಳಗೊಂಡ ಆಕ್ಷನ್ ಸನ್ನಿವೇಶವನ್ನು ಚಿತ್ರೀಕರಿಸಲು ಯೋಜಿಸಿದ್ದರು. ದರೆ ಕೊರೊನಾ ಹಿನ್ನಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಹೇರಿದೆ. ಹೀಗಾಗಿ ಈ ಯೋಜನೆಯನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :