Widgets Magazine

ಕನ್ನಡದ ದುಬಾರಿ ಸಂಭಾವನೆ ನಟರು ಇವರೇ!

ಬೆಂಗಳೂರು| Krishnaveni K| Last Modified ಶನಿವಾರ, 21 ನವೆಂಬರ್ 2020 (09:16 IST)
ಬೆಂಗಳೂರು: ಕನ್ನಡ ಚಿತ್ರರಂಗ ಈಗ ಸಾಕಷ್ಟು ಮುಂದುವರಿದಿದೆ. ಈಗಿನ ನಟರು ಕೋಟಿ ಲೆಕ್ಕದಲ್ಲೇ ಸಂಭಾವನೆ ಪಡೆಯುತ್ತಾರೆ. ಈ ಪೈಕಿ ಮೊದಲ ಬಾರಿಗೆ ಕೋಟಿ ಸಂಭಾವನೆ ಪಡೆದ ನಟರು ಯಾರು ಎಂದು ನಿಮಗೆ ಗೊತ್ತೇ?
 

ಮುಂಗಾರು ಮಳೆ ಸೂಪರ್ ಡೂಪರ್ ಹಿಟ್ ಆದಾಗ ಗೋಲ್ಡನ್ ಸ್ಟಾರ್ ಗಣೇಶ್ ಸ್ಟಾರ್ ವ್ಯಾಲ್ಯೂ ಇದ್ದಕ್ಕಿದ್ದಂತೆ ಗಗನಕ್ಕೇರಿತ್ತು. ಸ್ಯಾಂಡಲ್ ವುಡ್ ನಲ್ಲಿ 1 ಕೋಟಿ ರೂ. ಯನ್ನು ಸಂಭಾವನೆಯಾಗಿ ಪಡೆದ ಮೊದಲ ನಟ ಎಂಬ ಖ್ಯಾತಿ ಗಣೇಶ್ ರದ್ದು. ಈಗ ಒಂದು ಕೋಟಿ ಸಂಭಾವನೆ ಸ್ಟಾರ್ ನಟರ ಪಾಲಿಗೆ ಸಾಮಾನ್ಯವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ಸು ತಂದುಕೊಡುವ ನಟ ಎಂಬ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ 5 ಕೋಟಿ ರೂ. ಸಂಭಾವನೆ ಪಡೆದು ಅತ್ಯಂತ ದುಬಾರಿ ನಟ ಎಂಬ ದಾಖಲೆ ಮಾಡಿದ್ದರಂತೆ. ಆದರೆ ಈಗ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರೂ ಕೋಟಿ ಲೆಕ್ಕದಲ್ಲಿ  ಸಂಭಾವನೆ ಪಡೆಯುವವರೇ. ಕೆಜಿಎಫ್ ಬಳಿಕವಂತೂ ಕನ್ನಡ ಸಿನಿಮಾಗಳ ಮಾರುಕಟ್ಟೆಯೂ ದೊಡ್ಡದಾಗಿದೆ. ಹೀಗಾಗಿ ಕೋಟಿ ಸಂಭಾವನೆಗೆ ಈಗ ಲೆಕ್ಕವೇ ಇಲ್ಲ.
ಇದರಲ್ಲಿ ಇನ್ನಷ್ಟು ಓದಿ :